ADVERTISEMENT

ಇಟಲಿ ಹಡಗಿನ ಬಂಧಿತ ಸಿಬ್ಬಂದಿ ಸೋಮವಾರ ನ್ಯಾಯಾಲಯಕ್ಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 7:30 IST
Last Updated 20 ಫೆಬ್ರುವರಿ 2012, 7:30 IST
ಇಟಲಿ ಹಡಗಿನ ಬಂಧಿತ ಸಿಬ್ಬಂದಿ ಸೋಮವಾರ ನ್ಯಾಯಾಲಯಕ್ಕೆ
ಇಟಲಿ ಹಡಗಿನ ಬಂಧಿತ ಸಿಬ್ಬಂದಿ ಸೋಮವಾರ ನ್ಯಾಯಾಲಯಕ್ಕೆ   

ಕೊಚ್ಚಿ, (ಐಎಎನ್ಎಸ್): ಕೇರಳ ಸಮುದ್ರ ತೀರದಲ್ಲಿ ಗುಂಡು ಹಾರಿಸಿ ಮೀನುಗಾರರಿಬ್ಬರನ್ನು ಹತ್ಯೆ ಮಾಡಿ, ಭಾನುವಾರ ಬಂಧನಕ್ಕೆ ಒಳಗಾಗಿದ್ದ ಇಟಲಿ ಸರಕು ಸಾಗಣೆ ಹಡಗಿನ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಸೋಮವಾರ ಇಲ್ಲಿನ ಕೊಲ್ಲಂ ಮುಖ್ಯ ನ್ಯಾಯಾಂಗ  ಮ್ಯಾಜಿಸ್ಟ್ರೇಟ್ ಅವರ ಎದುರು ಅವರ ಮನೆಯಲ್ಲಿಯೇ ಸೋಮವಾರ ಸಂಜೆಯ ಒಳಗೆ ಹಾಜರು ಪಡಿಸಲಾಗುವುದು.

`ಎನ್‌ರಿಕಾ ಲೆಕ್ಸೀ~ ಹಡಗಿನಲ್ಲಿದ್ದ ಇಟಲಿಯ ನೌಕಾಪಡೆಗೆ ಸೇರಿದ 6 ಭದ್ರತಾ ಸಿಬ್ಬಂದಿ ಪೈಕಿ ಗುಂಡು ಹಾರಿಸಿದ ಲ್ಯಾಟೊರ್ ಮ್ಯಾಸಿಮಿಲಿಯಾನೊ ಮತ್ತು ಸಲ್ವಟೋರ್ ಗಿರೊನೆ ಅವರನ್ನು ಭಾನುವಾರ ಮಧ್ಯಾಹ್ನ ವಶಕ್ಕೆ ತೆಗೆದುಕೊಂಡು ರಾತ್ರಿ ವೇಳೆಗೆ ಬಂಧನಕ್ಕೆ ಒಳಪಡಿಸಲಾಗಿತ್ತು. ಬಂಧಿತರ ವಿರುದ್ಧ ಕೊಲೆ ಮೊಕದ್ದಮೆ ದಾಖಲಾಗಿದ್ದು, ತನಿಖೆಗೆ ವೆಲಿಂಗ್ಟನ್ ದ್ವೀಪದ ಬಳಿಯ ಸಿಐಎಸ್‌ಎಫ್ ಅತಿಥಿ ಗೃಹಕ್ಕೆ ಕರೆದುಕೊಂಡು ಹೋಗಲಾಗಿತ್ತು. 

ಸೋಮವಾರ ಸಾರ್ವಜನಿಕ ರಜೆ ಇರುವುದರಿಂದಾಗಿ ಬಂಧಿತ ಇಟಲಿ ಹಡಗಿನ ಇಬ್ಬರು ಭದ್ರತಾ ಸಿಬ್ಬಂದಿಯನ್ನು  ಕೊಲ್ಲಂ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಎದುರು ಅವರ ಮನೆಯಲ್ಲಿ ಸಂಜೆ ವೇಳೆಗೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.