ನವ ದೆಹಲಿ (ಪಿಟಿಐ): ವಾಹನ ಕಾಯ್ದೆ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದೂ ಸೇರಿದಂತೆ ಸಂಚಾರಿ ಅಪರಾಧಗಳ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕೆಂಬ ಹೊಸ ಪ್ರಸ್ತಾವನೆ ಹೊಂದಿರುವ ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ ಸೂಚಿಸಿತು.
ಕಾಯ್ದೆಗೆ ತಂದಿರುವ ಹೊಸ ತಿದ್ದುಪಡಿಯ ಅನ್ವಯ ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡಿದರೆ, ಸಿಗ್ನಲ್ ದೀಪ ಉಲ್ಲಂಘಿಸಿದರೆ, ಕಾರಿನ ಸೀಟ್ ಬೆಲ್ಟ್ ಹಾಗೂ ಬೈಕ್ ಸವಾರರು ಹೆಲ್ಮೆಟ್ ಧರಿಸದಿದ್ದರೆ ಇಂಥ ಕೆಲವು ಉಲ್ಲಂಘನೆ ಮೊದಲ ಬಾರಿಯಾಗಿದ್ದರೆ ದಂಡದ ಮೊತ್ತ 500 ರೂಪಾಯಿ. ಇದೇ ತಪ್ಪು ಪುನರಾವರ್ತನೆಯಾದರೆ ದಂಡದ ಮೊತ್ತ ಒಂದೂವರೆ ಸಾವಿರ ರೂಪಾಯಿ ಆಗಲಿದೆ.
ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ರೀತಿಯ ದುಬಾರಿ ದಂಡ ಹೇರುವ ಮೂಲಕ ಕಠಿಣ ನಿರ್ಧಾರಕ್ಕೆ ಸರ್ಕಾರ ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.