ಪಟ್ನಾ (ಐಎಎನ್‌ಎಸ್): ಬೋಧಗಯಾದಲ್ಲಿ 2013ರ ಜುಲೈ 7ರಂದು ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಲ್ಲಿನ ಅರ್ವಾಲ್ ಜಿಲ್ಲೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎನ್‌ಐಎ ಕಳೆದ ವಾರವಷ್ಟೇ ಒಬ್ಬನನ್ನು ವಶಕ್ಕೆ ಪಡೆದು, ತೀವ್ರ ವಿಚಾರಣೆಗೆ ಒಳಪಡಿಸಿತ್ತು ಎಂದು ಅವರು ತಿಳಿಸಿದರು.
ಬೋಧಗಯಾದ ಮಹಾಬೋಧಿ ದೇವಸ್ಥಾನದಲ್ಲಿ ಹತ್ತು ಬಾಂಬ್‌ಗಳು ಸ್ಫೋಟಗೊಂಡಿದ್ದರಿಂದ ಇಬ್ಬರು ಬೌದ್ಧ ಭಿಕ್ಷುಗಳು ಗಾಯಗೊಂಡಿದ್ದರು. ನಂತರ ದೇವಸ್ಥಾನದ ಆವರಣದೊಳಗಿದ್ದ ಮೂರು ಸಜೀವ ಬಾಂಬ್ಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.