ADVERTISEMENT

ಈಜಿಪ್ಟ್‌ನಿಂದ ತವರಿಗೆ ಬಂದ ಭಾರತೀಯರು

​ಪ್ರಜಾವಾಣಿ ವಾರ್ತೆ
Published 31 ಜನವರಿ 2011, 17:45 IST
Last Updated 31 ಜನವರಿ 2011, 17:45 IST
ಈಜಿಪ್ಟ್‌ನಿಂದ ತವರಿಗೆ ಬಂದ ಭಾರತೀಯರು
ಈಜಿಪ್ಟ್‌ನಿಂದ ತವರಿಗೆ ಬಂದ ಭಾರತೀಯರು   

ಮುಂಬೈ, (ಪಿಟಿಐ): ಗಲಭೆಪೀಡಿತ ಈಜಿಪ್ಟ್‌ನಿಂದ 300 ಮಂದಿ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ  ಕರೆತರಲಾಗಿದೆ.

ಭಯಭೀತರಾಗಿದ್ದ ಭಾರತೀಯರನ್ನು ಹೊತ್ತ ಏರ್‌ಇಂಡಿಯಾ ವಿಶೇಷ ವಿಮಾನ ಮಧ್ಯಾಹ್ನ ಇಲ್ಲಿಗೆ ಆಗಮಿಸಿತು.

ಈಜಿಪ್ಟ್ ಸರ್ಕಾರದ ವಿರುದ್ಧ ದೇಶದಾದ್ಯಂತ ಸಾರ್ವಜನಿಕರು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವುದರಿಂದ ಅಲ್ಲಿ ಸಿಲುಕಿಕೊಂಡಿದ್ದ ಭಾರತೀಯರು ಭಯಭೀತರಾಗಿದ್ದರು. ಅವರನ್ನು ಕರೆತರಲು ವಿಶೇಷವಾಗಿ ನಿಯೋಜಿಸಿದ್ದ ಬೋಯಿಂಗ್ 747-800 ವಿಮಾನವು ಭಾನುವಾರ ಕೈರೋಗೆ ತೆರಳಿ ಸೋಮವಾರ ಹಿಂತಿರುಗಿತು.

ಇನ್ನಷ್ಟು ಮಂದಿಯನ್ನು ಕರೆತರಲು ಏರ್ ಇಂಡಿಯಾ ಮತ್ತೆ ಸೋಮವಾರ ಇನ್ನೊಂದು ವಿಮಾನವನ್ನು ಕಳುಹಿಸಲು ನಿರ್ಧರಿಸಿದೆ.

ಪ್ರಸ್ತುತ ದೊರೆತಿರುವ ಅಂದಾಜಿನ ಪ್ರಕಾರ, ಪ್ರವಾಸಿಗರು ಸೇರಿದಂತೆ ಸುಮಾರು 600 ಭಾರತೀಯರು ಈಜಿಪ್ಟ್‌ನಲ್ಲಿರುವುದಾಗಿ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.