ADVERTISEMENT

ಈಶಾನ್ಯ ಭಾಗಗಳಲ್ಲಿ ಮಧ್ಯಮ ಪ್ರಮಾಣದ ಭೂಕಂಪ

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 5:30 IST
Last Updated 1 ಜುಲೈ 2012, 5:30 IST

ಗುವಾಹಟಿ/ನವದೆಹಲಿ (ಪಿಟಿಐ): ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ನಾಗಲ್ಯಾಂಡ್ ಹಾಗೂ ತ್ರಿಪುರ ರಾಜ್ಯಗಳು ಸೇರಿದಂತೆ ದೇಶದ ಈಶಾನ್ಯ ಭಾಗಗಳಲ್ಲಿ ಭಾನುವಾರ ಬೆಳಿಗ್ಗೆ ಮಧ್ಯಮ ಪ್ರಮಾಣದಲ್ಲಿ ಭೂಕಂಪ ಸಂಭವಿಸಿದ್ದು, ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.8ರಷ್ಟಿತ್ತೆಂದು ಅರುಣಾಚಲ ಪ್ರದೇಶದ ಹವಾಮಾನ ಇಲಾಖೆ ತಿಳಿಸಿದೆ.  ಭೂಕಂಪದ ಕೇಂದ್ರ ಬಿಂದು ಅಸ್ಸಾಂನ ಮಜುಲಿ ದ್ವೀಪದಲ್ಲಿ ಇತ್ತೆಂದು  ಹೇಳಲಾಗಿದೆ.

ಅದರೆ ನಾಗಾಲ್ಯಾಂಡ್‌ನಲ್ಲಿ 5.8 ರಷ್ಟು ತೀವ್ರತೆ ಭೂಕಂಪದ ದಾಖಲಾಗಿದೆ. ಭೂಕಂಪದಿಂದ ಭಯಗೊಂಡ ಜನತೆ ಮನೆಗಳಿಂದ, ಚರ್ಚುಗಳಿಂದ ಹೊರಗೋಡಿ ಬಂದರೆಂದು ವರದಿಗಳು ತಿಳಿಸಿವೆ. ಆದರೆ ಯಾವುದೇ ಹಾನಿಯಾದ ಕುರಿತು ವರದಿಗಳು ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT