ನವದೆಹಲಿ (ಬಿಜೆಪಿ): ಈ ವರ್ಷಾಂತಕ್ಕೆ ಉತ್ತರ ಭಾರತದ ನಾಲ್ಕು ರಾಜ್ಯಗಳಲ್ಲಿ ನಡೆ ಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ ಅನ್ನು ಹಿಂದಿಕ್ಕಿ ಮೇಲುಗೈ ಸಾಧಿಸಲಿದೆ ಎಂದು ‘ಟೈಮ್ಸ್ ನೌ’ ಮತ್ತು ‘ಹೆಡ್ ಲೈನ್ಸ್ ಟುಡೇ’ ನ್ಯೂಸ್ ಚಾನೆಲ್ ಗಳು ಬುಧವಾರ ರಾತ್ರಿ ಪ್ರಸಾರ ಮಾಡಿದ ಸಮೀಕ್ಷೆಗಳು ತಿಳಿಸಿವೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಬಿಂಬಿಸಿರುವುದು ಲಾಭ ತಂದಿದೆ. ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿ ಅವರಿಗಿಂತ ಮೋದಿ ಹೆಚ್ಚು ಜನಪ್ರಿಯರಾಗಿ ಹೊರಹೊಮ್ಮಿದ್ದಾರೆ.
ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್, ರಾಜಸ್ತಾನದಲ್ಲಿ ವಸುಂಧರಾ ರಾಜೆ ಸಿಂಧಿಯಾ, ಛತ್ತೀಸಗಡದಲ್ಲಿ ರಮಣ್ ಸಿಂಗ್ ಅಧಿಕ ಜನಬೆಂಬಲ ಹೊಂದಿದ್ದಾರೆ. ಆದರೆ ದೆಹಲಿಯಲ್ಲಿ ಶೀಲಾ ದೀಕ್ಷಿತ್ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಅರವಿಂದ ಕೇಜ್ರಿ ವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ (ಎಎಪಿ) ನಿರ್ಣಾಯಕ ಪಾತ್ರ ವಹಿಸಲಿದೆ.
ಟೈಮ್ಸ್ ನೌ ಪ್ರಕಾರ, ಒಟ್ಟು 230 ಸ್ಥಾನ ಗಳ ಮಧ್ಯಪ್ರದೇಶದಲ್ಲಿ ಬಿಜೆಪಿ- 130, ಕಾಂಗ್ರೆಸ್ 84, ಬಿಎಸ್ಪಿ 5, ಇತರೆ 11 ಲಭಿಸ ಲಿವೆ. 200 ಸ್ಥಾನಗಳ ರಾಜಸ್ತಾನದಲ್ಲಿ ಬಿಜೆಪಿ 118, ಕಾಂಗ್ರೆಸ್ 64, ಬಿಎಸ್ಪಿ 3, ಇತರೆ 15 ಗಳಿಸಲಿವೆ. 90 ಸ್ಥಾನಗಳ ಛತ್ತೀಸಗಡದಲ್ಲಿ ಬಿಜೆಪಿ 47, ಕಾಂಗ್ರೆಸ್ 40, ಬಿಎಸ್ಪಿ 2, ಇತರೆ 1 ಪಡೆಯಲಿವೆ. 70 ಸ್ಥಾನಗಳ ದೆಹಲಿಯಲ್ಲಿ ಬಿಜೆಪಿ 30, ಕಾಂಗ್ರೆಸ್ 29, ಎಎಪಿ 7, ಇತರೆ 4 ಹೊಂದಲಿವೆ ಎಂದು ಸಮೀಕ್ಷೆ ತಿಳಿಸಿದೆ.
ಹೆಡ್ ಲೈನ್ಸ್ ಟುಡೇ ಪ್ರಕಾರ, ಮಧ್ಯಪ್ರದೇಶದಲ್ಲಿ ಬಿಜೆಪಿ 130, ಕಾಂಗ್ರೆಸ್ 84, ದೆಹಲಿಯಲ್ಲಿ ಬಿಜೆಪಿ 28 ಮತ್ತು ಕಾಂಗ್ರೆಸ್ 28, ಎಎಪಿ 9 ಸ್ಥಾನ, ರಾಜಸ್ತಾನದಲ್ಲಿ ಬಿಜೆಪಿ 97 ಮತ್ತು ಕಾಂಗ್ರೆಸ್ 79, ಛತ್ತೀಸಗಡದಲ್ಲಿ ಬಿಜೆಪಿ 47 ಮತ್ತು ಕಾಂಗ್ರೆಸ್ 40 ಸ್ಥಾನ ಗಳಿಸಲಿವೆ ಎಂದು ಸಮೀಕ್ಷೆ ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.