ADVERTISEMENT

ಉತ್ತರಪ್ರದೇಶ: ಬಿಜೆಪಿ ಶಾಸಕ ಕುಶಾಗ್ರ ಸಾಗರ್ ವಿರುದ್ಧ ಅತ್ಯಾಚಾರ ಆರೋಪ

ಏಜೆನ್ಸೀಸ್
Published 29 ಮೇ 2018, 19:06 IST
Last Updated 29 ಮೇ 2018, 19:06 IST
ಉತ್ತರಪ್ರದೇಶ: ಬಿಜೆಪಿ ಶಾಸಕ ಕುಶಾಗ್ರ ಸಾಗರ್  ವಿರುದ್ಧ ಅತ್ಯಾಚಾರ ಆರೋಪ
ಉತ್ತರಪ್ರದೇಶ: ಬಿಜೆಪಿ ಶಾಸಕ ಕುಶಾಗ್ರ ಸಾಗರ್ ವಿರುದ್ಧ ಅತ್ಯಾಚಾರ ಆರೋಪ   

ಲಖನೌ: ಮದುವೆಯಾಗಿ ವಂಚಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಉತ್ತರಪ್ರದೇಶದ ಬದಾಯು ಪ್ರದೇಶದ ಯುವತಿಯೊಬ್ಬಳು ಬಿಜೆಪಿ ಶಾಸಕ ಕುಶಾಗ್ರ ಸಾಗರ್  ವಿರುದ್ಧ ದೂರು ದಾಖಲಿಸಿದ್ದಾರೆ.

ಕುಶಾಗ್ರ ಸಾಗರ್ ಉತ್ತರಪ್ರದೇಶ ಲಖನೌದ ಬಿಸೌಲಿ ವಿಧಾನಸಭಾ ಕ್ಷೇತ್ರದ ಶಾಸಕ. ಈತ ಮದುವೆಯಾಗುವುದಾಗಿ ನಂಬಿಸಿ ಸತತ ಎರಡು ವರ್ಷಗಳಿಂದ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಕುಶಾಗ್ರ ಸಾಗರ್ ನನ್ನ ಮೇಲೆ ಮೊದಲ ಬಾರಿ ಅತ್ಯಾಚಾರ ಎಸಗಿದಾಗ ಆತನ ಜತೆ ಮದುವೆ ಮಾಡಿಸುವುದಾಗಿ ಕುಶಾಗ್ರ ತಂದೆ ಯೋಗೇಂದ್ರ ಸಾಗರ್ ಭರವಸೆ ನೀಡಿದ್ದರು ಎಂದು ದೂರಿನಲ್ಲಿ ಹೇಳಿದ್ದಾರೆ.

ADVERTISEMENT

ಕುಶಾಗ್ರ ಅವರ ಮದುವೆ ಜೂನ 17ರಂದು ನಡೆಯಲಿದೆ. ಈ ಮದುವೆಯಾಗಲು ನಾನು ಬಿಡುವುದಿಲ್ಲ. ಅಕಸ್ಮಾತ್ ಅವರ ವಿವಾಹ ನಡೆದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಸಂತ್ರಸ್ಥೆ ತಿಳಿಸಿದ್ದಾರೆ.

ಈ ವಿಚಾರವನ್ನು ಬಯಲು ಮಾಡದಿದ್ದಲ್ಲಿ 20 ಲಕ್ಷ ಹಣ ಕೊಡುವುದಾಗಿಯೂ ಹೇಳಿದ್ದರು. ಇದೀಗ ನನ್ನ ಜೀವನ ಸಂಕಷ್ಟಕ್ಕೆ ಸಿಲುಕಿದೆ. ನಾನೀಗ ಎಲ್ಲಿಗೆ ಹೋಗಲಿ.  ಎಂದು ಅಳಲು ತೋಡಿಕೊಂಡಿದ್ದಾರೆ.

ಈಗಾಗಲೇ ಈ ಪ್ರಕರಣದ ಬಗ್ಗೆ ತನಿಖೆಯನ್ನು ಕೈಗೊಳ್ಳಲಾಗಿದೆ. ತನಿಖೆ ಮುಕ್ತಾಯದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಹಿಂದೆ ಅತ್ಯಾಚಾರ ಪ್ರಕರಣದ ಹಿನ್ನೆಲೆ ಬಿಜೆಪಿ ಶಾಸಕ ಕುಲದೀಪ್ ಸಿಂಗರ್ ಜೈಲು ವಾಸ ಅನುಭವಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.