ಡೆಹ್ರಾಡೂನ್ (ಪಿಟಿಐ): ಉತ್ತರಾಖಂಡದ ನೂತನ ವಿಧಾನಸಭಾಧ್ಯಕ್ಷರಾಗಿ ಕಾಂಗ್ರೆಸ್ ಶಾಸಕ ಗೋವಿಂದ್ ಸಿಂಗ್ ಕುಂಜ್‌ವಾಲ್ ಸೋಮವಾರ ಆಯ್ಕೆಯಾದರು. 67 ವರ್ಷದ ಕುಂಜ್‌ವಾಲ್ ಬಿಜೆಪಿಯ ಹರ್ಬನ್ಸ್ ಕಪೂರ್ ಅವರನ್ನು ಎಂಟು ಮತಗಳ ಅಂತರದಿಂದ ಪರಾಭವಗೊಳಿಸಿದರು. ಇದು ಆಂತರಿಕ ಬಂಡಾಯ ಎದುರಿಸುತ್ತಿರುವ ಮುಖ್ಯಮಂತ್ರಿ ವಿಜಯ್ ಬಹುಗುಣ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ದೊರೆತ ಪ್ರಮುಖ ಜಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.