ADVERTISEMENT

ಉತ್ತರ ಪ್ರದೇಶ: ತಂದೆಯ ಶವವನ್ನು ಸೈಕಲ್‌ರಿಕ್ಷಾದಲ್ಲಿ ಮನೆಗೊಯ್ದ ಮಕ್ಕಳು

ಏಜೆನ್ಸೀಸ್
Published 27 ಮಾರ್ಚ್ 2018, 10:46 IST
Last Updated 27 ಮಾರ್ಚ್ 2018, 10:46 IST
ಎಎನ್ಐ ಚಿತ್ರ
ಎಎನ್ಐ ಚಿತ್ರ   

ಬಾರಾಬಂಕಿ (ಉತ್ತರ ಪ್ರದೇಶ): ಶವ ಸಾಗಿಸುವ ವಾಹನ ಲಭ್ಯವಿಲ್ಲದ ಕಾರಣ ಮಕ್ಕಳು ತಮ್ಮ ತಂದೆಯ ಶವವನ್ನು ಸೈಕಲ್‌ರಿಕ್ಷಾದಲ್ಲಿ ಹಾಕಿ ಆಸ್ಪತ್ರೆಯಿಂದ ಮನೆಯವರೆಗೂ ತಳ್ಳಿಕೊಂಡು ಹೋದ ಘಟನೆ ಇಲ್ಲಿ ನಡೆದಿದೆ.

‘ಪ್ರತಿಜಿಲ್ಲಾ ಕೇಂದ್ರದಲ್ಲಿ ಶವ ಸಾಗಿಸುವ ಎರಡು ವಾಹನಗಳು ಇರುತ್ತವೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ವಾಹನಗಳ ಸೌಲಭ್ಯ ಇರುವುದಿಲ್ಲ. ಶವವನ್ನು ಆ್ಯಂಬುಲೆನ್ಸ್‌ನಲ್ಲಿ ತೆಗೆದುಕೊಂಡು ಹೋಗುವಂತಿಲ್ಲ’ ಎಂದು ಈ ಘಟನೆ ಕುರಿತು ಜಿಲ್ಲೆಯ ಮುಖ್ಯ ಆರೋಗ್ಯ ಅಧಿಕಾರಿ ಡಾ.ಆರ್‌.ಚಂದ್ರ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT