ADVERTISEMENT

ಉಪ ಪ್ರಧಾನಿ ಆಕಾಂಕ್ಷಿ ಅಲ್ಲ: ಜೇಟ್ಲಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 12:44 IST
Last Updated 22 ಮಾರ್ಚ್ 2014, 12:44 IST

ನವದೆಹಲಿ(ಪಿಟಿಐ): ‘ಎನ್ ಡಿಎ ಅಧಿಕಾರಕ್ಕೆ ಬಂದರೆ ಅರುಣ್ ಜೇಟ್ಲಿ ಉಪ ಪ್ರಧಾನಿಯಾಗುವ ರು' ಎಂಬುದಾಗಿ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ನೀಡಿರುವ ಹೇಳಿಕೆಯನ್ನು ತಳ್ಳಿ ಹಾಕಿರುವ ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಅವರು, ತಾನು ಯಾವುದೇ ಸ್ಥಾನಕ್ಕಾಗಿ ಕಾದಿಲ್ಲ ಎಂದು ಶನಿವಾರ ಸ್ಪಷ್ಟಪಡಿಸಿದರು.

ಪ್ರಚಾರಕಾಲದಲ್ಲಿ ಆರೋಪ, ಟೀಕೆಗಳು ಕೇಳಿ ಬಂದಿವೆ. ನಾನು ಆ ಯಾವುದೇ ಸ್ಥಾನದ ನಿರೀಕ್ಷೆಯಲ್ಲಿಲ್ಲ. ಈ ಬಗ್ಗೆ ಭರವಸೆ ನೀಡುತ್ತೇನೆ ಎಂದು ಜೇಟ್ಲಿ ತಿಳಿಸಿದರು.

ಅಮೃತಸರದಲ್ಲಿ ಶುಕ್ರವಾರ ನಡೆದ ರ‍್ಯಾಲಿಯಲ್ಲಿ ಪ್ರಕಾಶ್ ಸಿಂಗ್ ಬಾದಲ್ ಅವರು, ‘ಎನ್ ಡಿಎ ಅಧಿಕಾರಕ್ಕೆ ಬಂದರೆ ಜೇಟ್ಲಿ ಅವರು ಉಪ ಪ್ರಧಾನಿ ಅಥವಾ ಹಣಕಾಸು ಸಚಿವರಾಗಲಿದ್ದಾರೆ’ ಎಂದು ಹೇಳಿಕೆ ನೀಡಿದ್ದರು.

ಪ್ರಕಾಶ್ ಸಿಂಗ್ ಬಾದಲ್ ಅವರ ಆಲೋಚನೆಯಲ್ಲಿರುವುದು ನ್ಯಾಯ ಸಮ್ಮತ ಇರಬಹುದು. ಆದರೆ, ನಾನು ಆ ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ. ಅಮೃತಸರ ಮತ್ತು ಪಂಜಾಬ್ ನಲ್ಲಿ ಉತ್ತಮ ಧ್ವನಿಯ ಅಗತ್ಯವನ್ನು ಅಲ್ಲಿನ ಜನರು ನಿರೀಕ್ಷಿಸಿದ್ದಾರೆ ಎಂದು ಜೇಟ್ಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.