ಮುಂಬೈ: ಬಾಲಿವುಡ್ ನಟಿ ಆಯೆಷಾ ಟಾಕಿಯಾ ಇತ್ತೀಚೆಗೆ ಖಾಸಗಿ ಸಮಾರಂಭವೊಂದರಲ್ಲಿ ಕಾಣಿಸಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡಿದೆ! ‘ಆಯೆಷಾ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದು, ಸರ್ಜರಿ ಕೈಕೊಟ್ಟು ಅವರ ತುಟಿ, ಕೆನ್ನೆ ವಿರೂಪಗೊಂಡಿವೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳು, ಕಮೆಂಟ್‌ಗಳು ಹರಿದಾಡುತ್ತಿವೆ.
ಮುಂಬೈನಲ್ಲಿ ಬುಧವಾರ ಸಂಜೆ ರೆಸ್ಟೊರಂಟ್ ಒಂದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಯೆಷಾ ತಮ್ಮ ಪತಿ ಫರ್ಹಾನ್ ಅಜ್ಮಿ ಜತೆಗೆ ಕಾಣಿಸಿಕೊಂಡಿದ್ದರು.
ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಆಯೆಷಾ ಹೊಸ ರೂಪ ನೋಡಿ ಅಚ್ಚರಿಗೊಂಡಿದ್ದರು. ಆಯೆಷಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಈ ಚಿತ್ರಗಳನ್ನು ಕಂಡ ಹಲವರು, ‘ಪ್ಲಾಸ್ಟಿಕ್ ಸರ್ಜರಿ ಕೈಕೊಟ್ಟು ಆಯೆಷಾ ಮುಖ ವಿಕಾರಗೊಂಡಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆಯೆಷಾ ಅವರನ್ನು ತೀವ್ರವಾಗಿ ಅಪಹಾಸ್ಯ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.