ADVERTISEMENT

ಎಂಎನ್‌ಪಿಗೆ ಶುಕ್ರದೆಸೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ):  `2ಜಿ~ ಹಗರಣಕ್ಕೆ ಸಂಬಂಧಿಸಿದ  ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮೊಬೈಲ್ ಬಳಕೆದಾರರು ಗಮನಾರ್ಹ ಪ್ರಮಾಣದಲ್ಲಿ ತಮ್ಮ ನಿಷ್ಠೆಯನ್ನು ಇನ್ನೊಂದು ಸಂಸ್ಥೆಗೆ ವರ್ಗಾಯಿಸುವ ಸಾಧ್ಯತೆಗಳಿವೆ.

ಕೆಲ ದೂರಸಂಪರ್ಕ ವೃತ್ತಗಳಲ್ಲಿ   ಐಡಿಯಾ ಸೆಲ್ಯುಲರ್, ಯೂನಿನಾರ್, ಟಾಟಾ ಟೆಲಿಸರ್ವಿಸಸ್, ಲೂಪ್ ಟೆಲಿಕಾಂ ಮತ್ತು ವಿಡಿಯೊಕಾನ್ ಸಂಸ್ಥೆಗಳ ಗ್ರಾಹಕರಿಗೆ ಈ ತೀರ್ಪು ಆಘಾತ ನೀಡಿದೆ. ಈಗ ಅವರೆಲ್ಲ ಅನಿವಾರ್ಯವಾಗಿ  ಇತರ ಮೊಬೈಲ್ ಸಂಸ್ಥೆಗಳಿಗೆ ವಲಸೆ ಹೋಗಬಹುದು ಎಂದು ನಿರೀಕ್ಷಿಸಲಾಗಿದೆ.

ತೀರ್ಪಿನಿಂದ ಒಟ್ಟು ಮೊಬೈಲ್ ಗ್ರಾಹಕರಲ್ಲಿ ಶೇ 5ರಷ್ಟು ಚಂದಾದಾರರು ಮಾತ್ರ ಬಾಧಿತರಾಗಲಿದ್ದಾರೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅಂದಾಜಿಸಿದೆ.

ತಮ್ಮ ಮೊಬೈಲ್ ಸಂಖ್ಯೆ ಉಳಿಸಿಕೊಂಡು ಮೊಬೈಲ್ ಸೇವಾ ಸಂಸ್ಥೆ ಬದಲಾಯಿಸಿೊಳ್ಳಲು ಅವಕಾಶ ಮಾಡಿಕೊಡುವ (ಎಂಎನ್‌ಪಿ) ಸೌಲಭ್ಯವನ್ನು ಇದುವರೆಗೆ 2.90 ಕೋಟಿಗಳಷ್ಟು ಗ್ರಾಹಕರು ಬಳಸಿಕೊಂಡಿದ್ದಾರೆ.

ಮೊಬೈಲ್ ಸ್ಥಿರ ಸಂಖ್ಯೆಯ ಈ ಸೌಲಭ್ಯವನ್ನು ಗ್ರಾಹಕರು ಈಗ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವ ಸಾಧ್ಯತೆಗಳು ಇವೆ.

 ಗ್ರಾಹಕರು ಈ ಸೌಲಭ್ಯ ಬಳಸಿಕೊಳ್ಳಲು ತಮ್ಮ ಮೊಬೈಲ್‌ನಿಂದ 1900 ಸಂಖ್ಯೆಗೆ ಎಸ್‌ಎಂಎಸ್ ಕಳಿಸಬೇಕು. ಆನಂತರ ಆಯ್ಕೆ ಮಾಡಿಕೊಂಡ ಸಂಸ್ಥೆಯ ಚಂದಾದಾರರಾಗಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.