ADVERTISEMENT

ಎಂಜಿನಿಯರ್ ಮನೆಯಲ್ಲಿ ಬೆಳ್ಳಿ ಕುಕ್ಕರ್!

ಮೂವರು ಅಧಿಕಾರಿಗಳ ಮನೆಯಲ್ಲಿ ್ಙ 50 ಕೋಟಿ ಆಸ್ತಿ ಪತ್ತೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2013, 19:59 IST
Last Updated 2 ಜೂನ್ 2013, 19:59 IST

ಪಟ್ನಾ (ಐಎಎನ್‌ಎಸ್): ಬಿಹಾರದ ಆರ್ಥಿಕ ಅಪರಾಧ ತಡೆ ಘಟಕದ ಅಧಿಕಾರಿಗಳು ಮೂವರು ಸರ್ಕಾರಿ ಎಂಜಿನಿಯರ್ ಮನೆ ಮೇಲೆ ಇತ್ತೀಚೆಗೆ ದಾಳಿ ನಡೆಸಿ ರೂ. 50 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.

ಇವರಲ್ಲಿ ಮುಜಾಫರ್‌ಪುರದ ಕಟ್ಟಡ ನಿರ್ಮಾಣ ಇಲಾಖೆ ಎಂಜಿನಿಯರ್ ಅವಧೇಶ್ ಕುಮಾರ್ ಮಂಡಲ್ ಮನೆಯಲ್ಲಿ  ಬೆಳ್ಳಿಯ ಕುಕ್ಕರ್ ಪತ್ತೆಯಾಗಿದ್ದು ಕಂಡು ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ.

`ಬೆಳ್ಳಿ ಕುಕ್ಕರ್ ಕಂಡು ಅಚ್ಚರಿಯಾಯಿತು. ಅದನ್ನು ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.

ಕುಕ್ಕರ್ ಅಲ್ಲದೆ 1.5 ಕೆ.ಜಿ.ಚಿನ್ನ, 13 ಕೆ.ಜಿ.ಬೆಳ್ಳಿ ಹಾಗೂ 15 ವಜ್ರದ ಆಭರಣಗಳನ್ನು ಕಂಡು ತಬ್ಬಿಬ್ಬಾಗಿದ್ದಾರೆ. ಇದಲ್ಲದೇ ಈತನಿಗೆ ಎರಡು ಫ್ಲ್ಯಾಟ್ ಹಾಗೂ ಪಟ್ನಾದಲ್ಲಿ ಅಂಗಡಿ  ಸಹ ಇದೆ. ಇವಲ್ಲದೇ ಎಂಜಿನಿಯರ್ ಹೊಂದಿದ್ದ 25 ಬ್ಯಾಂಕ್ ಖಾತೆ ಹಾಗೂ ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

`ಕೇವಲ ಸರ್ಕಾರಿ ಎಂಜಿನಿಯರ್ ಆಗಿರುವ ಮಂಡಲ್ ರಾಜನಂತೆ ಬದುಕುತ್ತಿದ್ದಾರೆ. ಮನೆಯಲ್ಲಿ ಮೂರು ಬೆಳ್ಳಿಯ ಪೀಕದಾನಿ (ಉಗುಳುವ ಪಾತ್ರೆ) ಸಹ ಪತ್ತೆಯಾಯಿತು' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.