ADVERTISEMENT

ಎಂಜಿನ್ ಇಲ್ಲದೆ 10 ಕಿ.ಮೀ ದೂರ ಚಲಿಸಿದ ಅಹ್ಮದಾಬಾದ್-ಪುರಿ ಎಕ್ಸ್‌ಪ್ರೆಸ್‌ ರೈಲು

ಏಜೆನ್ಸೀಸ್
Published 8 ಏಪ್ರಿಲ್ 2018, 12:02 IST
Last Updated 8 ಏಪ್ರಿಲ್ 2018, 12:02 IST
ಚಿತ್ರ: ಎಎನ್‌ಐ ಟ್ವಿಟರ್‌
ಚಿತ್ರ: ಎಎನ್‌ಐ ಟ್ವಿಟರ್‌   

ಭುವನೇಶ್ವರ: ರೈಲು ಹಳಿಯ ಮೇಲೆ ಎಂಜಿನ್‌ ಇಲ್ಲದೆ ಅಹ್ಮದಾಬಾದ್-ಪುರಿ ಎಕ್ಸ್‌ಪ್ರೆಸ್‌ ರೈಲು ಸುಮಾರು 10 ಕಿ.ಮೀ ದೂರ ಚಲಿಸಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ ಘಟನೆ ಶನಿವಾರ ರಾತ್ರಿ ನಡೆದಿದ್ದು, ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ರೈಲ್ವೆ ಇಲಾಖೆಯ ಏಳು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಒಡಿಶಾದ ಟಿಟ್ಲಾಗರ್ ನಿಲ್ದಾಣದಿಂದ ಹೊರಟ ರೈಲು ಕೆಸಿಂಗಾ ಜಂಕ್ಷನ್‌ ಕಡೆಗೆ ಹೋಗುತ್ತಿತ್ತು. ರೈಲು ನಿಲುಗಡೆ ವೇಳೆ ಚಾಲಕ ಸ್ಕಿಡ್ ಬ್ರೇಕ್‌ ಹಾಕದೆ ಇರುವುದು ಘಟನೆಗೆ ಕಾರಣ ಎಂದು ಹೇಳಲಾಗಿದೆ.

ಪ್ರಯಾಣಿಕರೊಬ್ಬರು ವಿಡಿಯೊ ಚಿತ್ರೀಕರಣ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಚಲಿಸುತ್ತಿರುವ ರೈಲಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಎಂಜಿನ್‌ ಇಲ್ಲದಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.