ನವದೆಹಲಿ: ಈಗಾಗಲೇ ಎರಡು ರಾಜ್ಯಗಳು ತಮ್ಮದೇ ಪ್ರವೇಶ ನಿಯಮಾವಳಿ ಅಳವಡಿಸಿಕೊಂಡಿರುವುದರಿಂದ ಮತ್ತು ಉಳಿದ ಲಭ್ಯ ಅವಧಿ ಬಹಳ ಕಡಿಮೆ ಇರುವುದರಿಂದ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ)ಯು ಸುಪ್ರೀಂಕೋರ್ಟ್ ತೀರ್ಪಿನನ್ವಯ ಪ್ರಸಕ್ತ ವರ್ಷದಿಂದಲೇ ಎಂಬಿಬಿಎಸ್ ಕೋರ್ಸ್‌ಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವುದು ಕಷ್ಟ ಎಂದು ಆರೋಗ್ಯ ಸಚಿವಾಲಯದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಕರ್ನಾಟಕ ಮತ್ತು ಆಂಧ್ರಪ್ರದೇಶ ಈಗಾಗಲೇ ತಮ್ಮದೇ ವೈದ್ಯಕೀಯ ಪೂರ್ವ ಪರೀಕ್ಷೆ ನಡೆಸಿದ್ದು, ತಮಿಳುನಾಡು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗೆ ಒಪ್ಪಿಗೆ ಸೂಚಿಸಿಲ್ಲ. ಉಳಿದ ರಾಜ್ಯಗಳು ಈ ವರ್ಷದ ಪಠ್ಯ ಅಂತಿಮಗೊಳಿಸಲು, ಪರೀಕ್ಷೆ ಮತ್ತು ಪ್ರಯೋಗ ಕೈಗೊಳ್ಳಲು ಸೂಕ್ತ ಪ್ರಾತಿನಿಧಿಕ ಸಂಸ್ಥೆಯ ಕೊರತೆ ಎದುರಿಸುತ್ತಿವೆ ಎಂದು ಅವು ಹೇಳಿವೆ.
ಈ ಮುನ್ನ ಭಾರತೀಯ ವೈದ್ಯಕೀಯ ಮಂಡಳಿಯು ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯೊಂದಿಗೆ ಪರೀಕ್ಷೆ ನಡೆಸುವ ಬಗ್ಗೆ ಚರ್ಚಿಸಿತ್ತಾದರೂ, ಈವರೆಗೂ ಈ ಬಗೆಗಿನ ಒಪ್ಪಂದವನ್ನು ಅಂತಿಮಗೊಳಿಸಿಲ್ಲ ಎಂದೂ ಅವು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.