ADVERTISEMENT

ಎಂಬಿಬಿಎಸ್ ಪ್ರವೇಶ: ಋಣಾತ್ಮಕ ಅಂಕ ಕೈಬಿಡಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಮುಂದಿನ ವರ್ಷದ ಉದ್ದೇಶಿತ ಎಂಬಿಬಿಎಸ್ ಪ್ರವೇಶ ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳನ್ನು ಕೈಬಿಡಲು  ಭಾರತೀಯ ವೈದ್ಯಕೀಯ ಮಂಡಳಿಯ ಆಡಳಿತ ಮಂಡಳಿ ಸದಸ್ಯರು ಸೋಮವಾರ ನಿರ್ಧರಿಸಿದ್ದಾರೆ.

ಆದರೆ ಸಮ ಅಂಕಗಳನ್ನು ಪಡೆದವರಲ್ಲಿ ಅಂತಿಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಮಾತ್ರ ಋಣಾತ್ಮಕ ಅಂಕಗಳನ್ನು (ತಪ್ಪು ಉತ್ತರಕ್ಕೆ ಅಂಕ ಕಡಿತ) ಬಳಸುವ ಕ್ರಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಕೆ.ಕೆ.ತಲ್ವಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿಯ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಋಣಾತ್ಮಕ ಅಂಕಗಳನ್ನು ಅಭ್ಯರ್ಥಿ ಪಡೆದ ಒಟ್ಟು ಅಂಕಗಳನ್ನು ಕಡಿಮೆ ಮಾಡಲು ಬಳಸುವಂತಿಲ್ಲ; ಬದಲಿಗೆ ಮೆರಿಟ್ ಅಭ್ಯರ್ಥಿಗಳನ್ನು ನಿರ್ಧರಿಸುವಾಗ ಮಾತ್ರ ಬಳಸಬೇಕು ಎಂದು ಮಂಡಳಿ ನಿರ್ಧರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.