ADVERTISEMENT

ಎನ್‌ಟಿಆರ್‌ ಜೀವನಾಧರಿತ ಚಿತ್ರದ ಚಿತ್ರೀಕರಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST
ಚಿತ್ರೀಕರಣಕ್ಕೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಚಾಲನೆ ನೀಡಿದರು. ನಂದಮೂರಿ ಬಾಲಕೃಷ್ಣ ಮತ್ತು ರಾಘವೇಂದ್ರ ರಾವ್‌ ಇದ್ದಾರೆ.
ಚಿತ್ರೀಕರಣಕ್ಕೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಚಾಲನೆ ನೀಡಿದರು. ನಂದಮೂರಿ ಬಾಲಕೃಷ್ಣ ಮತ್ತು ರಾಘವೇಂದ್ರ ರಾವ್‌ ಇದ್ದಾರೆ.   

ಹೈದರಾಬಾದ್‌: ಇಲ್ಲಿನ ರಾಮಕೃಷ್ಣ ಸ್ಟುಡಿಯೊದಲ್ಲಿ ತೆಲುಗು ಚಿತ್ರರಂಗದ ಮೇರುನಟ ಎನ್‌.ಟಿ.ರಾಮರಾವ್‌ ಅವರ ಜೀವನ ಆಧರಿಸಿದ ಚಲನಚಿತ್ರದ ಚಿತ್ರೀಕರಣಕ್ಕೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಗುರುವಾರ ಚಾಲನೆ ನೀಡಿದರು.

‘ಎನ್‌ಟಿಆರ್‌ ಅವರ ಲವಕುಶ, ಪಾತಾಳ ಭೈರವಿ ಮತ್ತು ದೇಶೋದ್ಧಾರಕುಲು ಸೇರಿದಂತೆ ಹಲವು ಚಿತ್ರಗಳು ಮಾರ್ಚ್‌ 29ರಂದೇ ಬಿಡುಗಡೆಯಾಗಿದ್ದವು. ಹಾಗಾಗಿ, ಈ ಚಿತ್ರದ ಚಿತ್ರೀಕರಣಕ್ಕೂ 29ರಂದೇ ಚಾಲನೆ ನೀಡಲಾಗಿದೆ’ ಎಂದು ಎನ್‌ಟಿಆರ್‌  ಅಭಿಮಾನಿಯಾಗಿರುವ ವೆಂಕಯ್ಯ ನಾಯ್ಡು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT