ADVERTISEMENT

ಎನ್‌ಸಿಟಿಸಿ ಸ್ಥಾಪನೆ ಸಭೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 19:30 IST
Last Updated 5 ಮಾರ್ಚ್ 2012, 19:30 IST

ಚೆನ್ನೈ (ಪಿಟಿಐ): ರಾಜ್ಯಗಳ ಸಹಭಾಗಿತ್ವವಿಲ್ಲದಿದ್ದಲ್ಲಿ ಉದ್ದೇಶಿತ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ (ಎನ್‌ಸಿಟಿಸಿ) ಚಾಲನೆಗೆ ಬರದು ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಭಿಪ್ರಾಯಪಟ್ಟಿದ್ದಾರೆ.

ಈ ವಿಷಯವಾಗಿ ಇದೇ 12ರಂದು ಕರೆಯಲಾಗಿರುವ ಅಧಿಕಾರಿಗಳ ಮಟ್ಟದ ಸಭೆಯಿಂದ ಯಾವುದೇ  ಪ್ರಯೋಜನವಾಗದು. ಆದಕಾರಣ ಶೀಘ್ರವೇ ಮುಖ್ಯಮಂತ್ರಿಗಳ ಸಭೆಯನ್ನು ಕರೆಯಬೇಕೆಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಜಯಲಲಿತಾ ಪತ್ರ ಬರೆದಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.