ADVERTISEMENT

ಎನ್‌ಸಿಸಿ ತರಬೇತಿ ಕಡ್ಡಾಯ: ಸಂಸದರ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 19:30 IST
Last Updated 9 ಜೂನ್ 2011, 19:30 IST

ನವದೆಹಲಿ (ಐಎಎನ್‌ಎಸ್): ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಒಂದು ವರ್ಷ ಎನ್‌ಸಿಸಿ ತರಬೇತಿ ಕಡ್ಡಾಯಗೊಳಿಸಬೇಕು ಎಂದು ರಕ್ಷಣಾ ಸಚಿವಾಲಯವನ್ನು ಸಂಸದರು ಕೋರಿದ್ದಾರೆ.

ನವದೆಹಲಿಯಲ್ಲಿ ಬುಧವಾರ ನಡೆದ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸಲಹಾ ಸಮಿತಿ ಸಭೆಯಲ್ಲಿ, ಶಾಲಾ ಮಕ್ಕಳಿಗೆ ವಿದ್ಯಾರ್ಥಿ ದಿಸೆಯಲ್ಲಿ ಎನ್‌ಸಿಸಿ ತರಬೇತಿ ಕಡ್ಡಾಯಗೊಳಿಸಬೇಕು ಎಂಬ ವಿಷಯಕ್ಕೆ ಸಂಸದರು ಪಕ್ಷಭೇದ ಮರೆತು ಒಕ್ಕೊರಲಿನಿಂದ ಸಹಮತ ವ್ಯಕ್ತಪಡಿಸಿದರು.

ಬದುಕಿನಲ್ಲಿ ಶಿಸ್ತು ಮತ್ತು ಸಾಮಾಜಿಕ ಮೌಲ್ಯಗಳ ಬಗ್ಗೆ ತಿಳಿವಳಿಕೆ ಮೂಡಲು ಶೈಕ್ಷಣಿಕ ಜೀವನದಲ್ಲಿ ಕನಿಷ್ಠ ಒಂದು ವರ್ಷ ಎನ್‌ಸಿಸಿ ತರಬೇತಿ ಕಡ್ಡಾಯ ಮಾಡಬೇಕು ಎಂದು ಕೆಲವರು ಸಲಹೆ ಮಾಡಿದರು. ರಕ್ಷಣಾ ಸಚಿವ ಎ.ಕೆ.ಆಂಟನಿ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.