ADVERTISEMENT

ಎನ್‌ಸಿ ಬೆಂಬಲ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 19:30 IST
Last Updated 9 ಜುಲೈ 2012, 19:30 IST

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿಯನ್ನು ಪಕ್ಷ ಬೆಂಬಲಿಸುವುದಾಗಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಪರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಸೋಮವಾರ ಟ್ವಿಟರ್‌ನಲ್ಲಿ  ಬರೆದಿದ್ದಾರೆ.

ಒಮ್ಮತಕ್ಕೆ ಜೆಡಿಯು
ರಾಷ್ಟ್ರಪತಿ ಚುನಾವಣೆ ವಿವಾದದಿಂದ ತಲೆದೋರಿರುವ ಭಿನ್ನಮತ ಬದಿಗಿಟ್ಟು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎಲ್ಲರೂ ಒಪ್ಪುವಂತಹ ಅಭ್ಯರ್ಥಿಯನ್ನು ವಿರೋಧ ಪಕ್ಷಗಳು ಕಣಕ್ಕಿಳಿಸಬೇಕೆಂದು ಜೆಡಿಯು ತಿಳಿಸಿದೆ.

`ರಾಷ್ಟ್ರಪತಿ ಚುನಾವಣೆ ವಿಷಯವೇ ಬೇರೆ. ಏಕೆಂದರೆ ಆ ಸ್ಥಾನಕ್ಕೆ ಅನುಭವಿ ಹಾಗೂ ನುರಿತ ರಾಜಕಾರಣಿ ಪ್ರಣವ್ ನಿಂತಿದ್ದಾರೆ. ಹೀಗಾಗಿ ಅವರನ್ನು ಬೆಂಬಲಿಸಲು ನಿರ್ಧರಿಸಲಾಯಿತು. ಆದರೆ, ಉಪರಾಷ್ಟ್ರಪತಿಯ ವಿಷಯ ಹಾಗಲ್ಲ. ಎಲ್ಲರಿಗೂ ಒಪ್ಪಿಗೆಯಾಗುವಂತಹ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪ್ರಯತ್ನ ಮುಂದುವರಿಸಬೇಕು~ ಎಂದು ಜೆಡಿಯು ಅಧ್ಯಕ್ಷ ಶರದ್ ಯಾದವ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.