ನವದೆಹಲಿ (ಪಿಟಿಐ): ದೇಶದಲ್ಲಿ ಪರಮಾಣು ಸ್ಥಾವರಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಮಾಣು ಇಂಧನ ಪುನರ್‌ಸಂಸ್ಕರಣೆಗೆ ಎರಡನೇ ಪರಮಾಣು ಇಂಧನ ಸಂಕೀರ್ಣವನ್ನು ರಾಜಸ್ತಾನದಲ್ಲಿ ಸ್ಥಾಪಿಸಲಾಗುತ್ತಿದೆ.
ರಾಜಸ್ಥಾನದ ಕೋಟಾದಲ್ಲಿ ರಾವಭಾಟಾ ಪರಮಾಣು ಸ್ಥಾವರದ ಬಳಿ 2400 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪರಮಾಣು ಇಂಧನ ಸಂಕೀರ್ಣವನ್ನು ಸ್ಥಾಪಿಸಲಾಗುತ್ತಿದೆ.
ಭಧ್ರತೆಗೆ ಸಂಬಂಧಿಸಿದ ಸಚಿವ ಸಂಪುಟ ಸಮಿತಿಯು ಈಗಾಗಲೇ ಈ ಸಂಕೀರ್ಣ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿದೆ. ಪರಮಾಣು ಇಂಧನ ಬೇಡಿಕೆ ಗಮನದಲ್ಲಿ ಇಟ್ಟುಕೊಂಡು ಎರಡನೇ ಸಂಕೀರ್ಣವನ್ನು ಆರಂಭಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
12ನೇ ಪಂಚವಾರ್ಷಿಕ ಯೋಜನೆಯಲ್ಲಿ ದೇಶದಲ್ಲಿ 17,300 ಮೆ. ವಾ. ಪರಮಾಣು ವಿದ್ಯುತ್ ಉತ್ಪಾದಿಸುವ ಗುರಿ ಹಾಕಿಕೊಳ್ಳಲಾಗಿದೆ. ದೇಶದಲ್ಲಿ ಪ್ರಸಕ್ತ 5500 ಮೆ. ವಾ. ಪರಮಣು ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಹರಿಯಾಣದ ಗೋರಕ್‌ಪುರ, ಮಹಾರಾಷ್ಟ್ರದ ಜೈತಾಪುರ ಮತ್ತು ಗುಜರಾತ್‌ದ ಮಿತಿವೃದ್ಧಿಯಲ್ಲಿ ಸ್ಥಾಪಿಸಲಾಗುತ್ತಿರುವ ಪರಮಾಣು ಸ್ಥಾವರಗಳ ಪರಮಾಣು ಇಂಧನ ಅಗತ್ಯವನ್ನು ಕೋಟಾದ ಪರಮಾಣು ಇಂಧನ ಪುನರ್‌ಸಂಸ್ಕರಣ ಸಂಕೀರ್ಣವು ಪೂರೈಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.