ADVERTISEMENT

ಎಲ್‌ಜೆಡಿ ಪಕ್ಷ ನಾಳೆ ಅಸ್ತಿತ್ವಕ್ಕೆ

ಪಿಟಿಐ
Published 16 ಮೇ 2018, 19:30 IST
Last Updated 16 ಮೇ 2018, 19:30 IST

ನವದೆಹಲಿ: ಶರದ್ ಯಾದವ್ ಅವರ ಬೆಂಬಲಿಗರು ಸೇರಿ ಕಟ್ಟಿರುವ ಲೋಕತಾಂತ್ರಿಕ ಜನತಾದಳ ಪಕ್ಷಕ್ಕೆ (ಎಲ್‌ಜೆಡಿ) ಶುಕ್ರವಾರ (ಮೇ 18) ಚಾಲನೆ ಸಿಗಲಿದೆ.

ಶರದ್ ಯಾದವ್ ಅವರು ಪಕ್ಷದ ಸಲಹೆಗಾರರಾಗಿ ಮತ್ತು ರಾಜಸ್ಥಾನದ ಮಾಜಿ ಸಚಿವ ಫತೇ ಸಿಂಗ್ ಅವರು ಅಧ್ಯಕ್ಷರಾಗಿ ಇರುತ್ತಾರೆ ಎಂದು ಜೆಡಿಯು ಬಂಡಾಯ ಗುಂಪಿನ ಮುಖಂಡ ಅರುಣ್ ಶ್ರೀವಾಸ್ತವ ತಿಳಿಸಿದ್ದಾರೆ. ತಾಲ್‌ಕಟೋರ ಮೈದಾನದಲ್ಲಿ ಸಂಸದ ವೀರೇಂದ್ರ ಕುಮಾರ್ ಸೇರಿದಂತೆ ಸುಮಾರು 8 ಸಾವಿರ ಬೆಂಬಲಿಗರು ಸೇರುವ ನಿರೀಕ್ಷೆಯಿದೆ.

ಹೊಸ ರೀತಿಯ ರಾಜಕಾರಣವನ್ನು ಪರಿಚಯಿಸುವುದು ಪಕ್ಷದ ಉದ್ದೇಶ ಎಂದು ಶ್ರೀವಾಸ್ತವ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.