ADVERTISEMENT

ಎಲ್‌ಪಿಜಿ ಟ್ಯಾಂಕರ್ ಮುಷ್ಕರ ಅಂತ್ಯ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 10:40 IST
Last Updated 8 ಮಾರ್ಚ್ 2012, 10:40 IST

ಚೆನ್ನೈ (ಪಿಟಿಐ): ಕಳೆದೊಂದು ವಾರದಿಂದ ಅಡುಗೆ ಅನಿಲದ (ಎಲ್‌ಪಿಜಿ) ವ್ಯತ್ಯಯದಿಂದ ಪರದಾಡುತ್ತಿದ್ದವರಿಗಿದು ಸಂತಸದ ಸುದ್ದಿ...!

ಅನಿಲ ಸಾಗಣೆ ಟ್ಯಾಂಕರ್‌ಗಳ ಬಾಡಿಗೆ ದರ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದ ಟ್ಯಾಂಕರ್ ಮಾಲಿಕರು ಸರ್ಕಾರ ಬುಧವಾರ ತೈಲ ಮಾರಾಟ ಕಂಪೆನಿಗಳ ಜತೆ ಮಾತುಕತೆ ನಡೆಸಿದ ಹಿನ್ನೆಲೆಯಲ್ಲಿ ಗುರುವಾರ ಮುಷ್ಕರ ಕೈ ಬಿಟ್ಟಿದ್ದಾರೆ.

ದರ ಪರಿಷ್ಕರಣೆ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆಬ್ರವರಿ 29 ರಂದು ದಕ್ಷಿಣ ಪ್ರಾಂತೀಯ ಸಗಟು ಎಲ್‌ಪಿಜಿ ಸಾಗಣೆ ಟ್ಯಾಂಕರ್ ಮಾಲೀಕರ ಸಂಘ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಎಲ್‌ಪಿಜಿ ಗ್ರಾಹಕರು ವಾರಪೂರ್ತಿ ಪರದಾಡುವಂತಾಗಿತ್ತು.

ಮುಷ್ಕರವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ತೈಲ ಮಾರಾಟ ಕಂಪೆನಿ ಹಾಗೂ ಟ್ಯಾಂಕರ್ ಮಾಲಿಕರ ಜತೆ ಶನಿವಾರ ನಡೆಸಿದ ಸಭೆ ವಿಫಲಗೊಂಡಿತ್ತು.

ಆದ್ದರಿಂದ ಬುಧವಾರ ಸರ್ಕಾರ ನಾಗರೀಕ ಪೂರೈಕೆ ಮತ್ತು ಗ್ರಾಹಕರ ಹಿತರಕ್ಷಣಾ ಆಯೋಗದ ಆಯುಕ್ತ ಪಿ.ಎಂ.ಬಷಿರ್ ಅಮ್ಮಹದ್ ಅವರ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.