ಕೋಲ್ಕತ್ತ (ಐಎಎನ್ಎಸ್): ಅಂತರ್ಜಾಲದ ಅಡಚಣೆಯಿಂದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸೇವೆಯಲ್ಲಿ ಶನಿವಾರ ಭಾರಿ ವ್ಯತ್ಯಯ ಉಂಟಾಯಿತು.
ಬೆಳಿಗ್ಗೆಯಿಂದ ಬಹುತೇಕ ಎಟಿಎಂಗಳೂ ಸಹಾ ಕೆಲಸಮಾಡುತ್ತಿಲ್ಲವಾದ್ದರಿಂದ ಬ್ಯಾಂಕ್ನ ಹಲವು ಶಾಖೆಗಳಲ್ಲಿ ಗ್ರಾಹಕರು ದಿಡೀರ್ ಪ್ರತಿಭಟನೆ ನಡೆಸಿದರು.
`ದೇಶದಾದ್ಯಂತ ತೀವ್ರ ಸಮಸ್ಯೆ ಇತ್ತು~ ಎಂದು ಬ್ಯಾಂಕ್ನ ಸಹಾಯಕ ಪ್ರಧಾನ ವ್ಯವಸ್ಥಾಪಕ (ಸಾರ್ವಜನಿಕ ಸಂಪರ್ಕ) ಬೆಂಗಾಲ್ ವೃತ್ತದ ಸುಬ್ರತಾ ಬಿಸ್ವಾಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.