ADVERTISEMENT

ಎಸ್ ಬ್ಯಾಂಡ್: ಪ್ರಧಾನಿ ಹೇಳಿಕೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 17:45 IST
Last Updated 22 ಫೆಬ್ರುವರಿ 2011, 17:45 IST

ನವದೆಹಲಿ (ಪಿಟಿಐ): ಎಸ್ ಬ್ಯಾಂಡ್ ಹಂಚಿಕೆಗೆ ಸಂಬಂಧಿಸಿದಂತೆ ಇಸ್ರೊ ಮತ್ತು ದೇವಾಸ್ ಮಲ್ಟಿಮೀಡಿಯಾ ಮಧ್ಯೆ ನಡೆದ ಒಪ್ಪಂದದ ಕುರಿತು ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಪ್ರಸಕ್ತ ಸಂಸತ್ತಿನ ಅಧಿವೇಶನದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಬೇಕೆಂದು ಬಿಜೆಪಿ ಮಂಗಳವಾರ ಆಗ್ರಹಿಸಿದೆ.

2ಜಿ ಸ್ಪೆಕ್ಟ್ರಂ ಹಗರಣಕ್ಕೆ ಹೋಲಿಸಿದರೆ ದೇವಾಸ್ ಹಗರಣ ಎಷ್ಟೋ ಪಟ್ಟು ದೊಡ್ಡದಾಗಿದೆ. ಪ್ರಧಾನಿಯವರ ಅಧೀನದಲ್ಲಿ ಬರುವ  ಬಾಹ್ಯಾಕಾಶ ಸಂಸ್ಥೆಯಲ್ಲಿ ಇಂತಹದ್ದೊಂದು ಹಗರಣ ನಡೆದಿದೆ ಎಂದರೆ ಇದಕ್ಕೆ ಅವರೇ ನೇರ ಹೊಣೆ ಎಂದು ಲೋಕಸಭೆಯಲ್ಲಿ ಪಕ್ಷದ ಉಪನಾಯಕ ಗೋಪಿನಾಥ ಮುಂಡೆ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.