ADVERTISEMENT

ಏಪ್ರಿಲ್ 4 ರಿಂದ ಮೇ 10ರವರೆಗೆ ಚುನಾವಣೋತ್ತರ ಸಮೀಕ್ಷೆ ನಿಷೇಧ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 19:30 IST
Last Updated 17 ಮಾರ್ಚ್ 2011, 19:30 IST

ನವದೆಹಲಿ (ಪಿಟಿಐ): ಏಪ್ರಿಲ್ 4ರಿಂದ ಮೇ 10ರವರೆಗೆ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸುವುದಕ್ಕೆ ಕೇಂದ್ರ ಚುನಾವಣಾ ಆಯೋಗ ನಿಷೇಧ ಹೇರಿದೆ.

ಐದು ರಾಜ್ಯಗಳಲ್ಲಿ ವಿಧಾನಸಭೆಗೆ ಚುನಾವಣೆಗಳು ಜರುಗುತ್ತಿರುವ ಹಿನ್ನೆಲೆಯಲ್ಲಿ ಆಯೋಗವು ಈ ನಿರ್ಧಾರ ಕೈಗೊಂಡಿದೆ.

ಮೊದಲಿಗೆ ಅಸ್ಸಾಂನಲ್ಲಿ ಏಪ್ರಿಲ್ 4ರಂದು ಚುನಾವಣೆ ನಡೆಯಲಿದೆ. ಅಂತಿಮವಾಗಿ ಮೇ 10ರಂದು ಪಶ್ಚಿಮ ಬಂಗಾಳದಲ್ಲಿ ಕೊನೆಯ ಹಂತದ ಚುನಾವಣೆ ನಡೆಯಲಿದೆ. ಈ ಅವಧಿಯಲ್ಲಿ ಯಾವುದೇ ರೀತಿಯ ಚುನಾವಣಾ ಫಲಿತಾಂಶದ ಅಂದಾಜು ಅಥವಾ ಸಮೀಕ್ಷಾ ವಿವರಗಳನ್ನು ಪ್ರಕಟಿಸುವುದಕ್ಕೆ ಆಯೋಗವು ನಿಷೇಧ ವಿಧಿಸಿದೆ.

ಪ್ರತಿಯೊಂದು ಹಂತದಲ್ಲೂ ಮತದಾನ ನಡೆದ ನಂತರದ 48 ಗಂಟೆಗಳ ಅವಧಿಯ ತನಕ ಯಾವುದೇ ಮತಗಟ್ಟೆಗಳ ಸಮೀಕ್ಷೆ, ಫಲಿತಾಂಶ ರೂಪದ ಅಭಿಪ್ರಾಯಗಳ ಕ್ರೋಡೀಕರಣ ಅಥವಾ ಸಮೀಕ್ಷಾ ವರದಿಗಳನ್ನು ವಿದ್ಯುನ್ಮಾನ ಮಾಧ್ಯಮಗಳು ಪ್ರಕಟಿಸುವಂತಿಲ್ಲ ಎಂದೂ ಆಯೋಗವು ಸೂಚಿಸಿದೆ.

ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಏಪ್ರಿಲ್ 13ರಂದು ಒಂದು ಹಂತದಲ್ಲಿ, ಅಸ್ಸಾಂನಲ್ಲಿ ಏಪ್ರಿಲ್ 4 ಮತ್ತು
11ರಂದು ಎರಡು ಹಂತದಲ್ಲಿ ಹಾಗೂ ಪಶ್ಚಿಮ ಬಂಗಾಳದಲ್ಲಿ ಆರು ಹಂತದಲ್ಲಿ ಅಂದರೆ ಏಪ್ರಿಲ್ 18, 23, 27 ಮತ್ತು ಮೇ 3, 7, ಹಾಗೂ 10ರಂದು ಚುನಾವಣೆಗಳು ಜರುಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.