
ಪಣಜಿ, (ಪಿಟಿಐ): ಬೆಂಗಳೂರಿನಲ್ಲಿ ನಡೆಯುತ್ತಿದ್ದ ವೈಮಾನಿಕ ಪ್ರದರ್ಶನ ವನ್ನು (ಏರೋ ಇಂಡಿಯಾ ಷೋ) ಮುಂದಿನ ವರ್ಷದಿಂದ ಗೋವಾಕ್ಕೆ ಸ್ಥಳಾಂತರಿಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ರಕ್ಷಣಾ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾರ್ಚ್‌ನಲ್ಲಿ ಆಯೋಜಿಸಿರುವ ರಕ್ಷಣಾ ಮೇಳದ ತಯಾರಿ ನಡೆದಿದೆ’ ಎಂದು ರಕ್ಷಣಾ ಕಾರ್ಯದರ್ಶಿ (ಉತ್ಪಾದನೆ) ಅಶೋಕ್ ಕುಮಾರ್ ಹೇಳಿದ್ದಾರೆ.
ದಕ್ಷಿಣ ಗೋವಾದ ಕ್ವಿಟ್ಟಾಲ್ ಗ್ರಾಮದಲ್ಲಿ ಮಾರ್ಚ್ 28ರಿಂದ 31 ರವರೆಗೆ ನಡೆಯುವ ರಕ್ಷಣಾ ಮೇಳದ ಸಿದ್ಧತೆ ಪರಿಶೀಲಿಸಿದ ಅವರು, ಮೇಳಕ್ಕೆ ಸದ್ಯ ತಾತ್ಕಾಲಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಮುಂದೆ ಗೋವಾದಲ್ಲಿಯೇ ಶಾಶ್ವತವಾಗಿ ನಡೆಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದರು.
ರಕ್ಷಣಾ ಇಲಾಖೆ ಗೋವಾದಲ್ಲಿ ರಕ್ಷಣಾ ಮೇಳ ನಡೆಸುವುದರ ಹಿಂದೆ ಇಲ್ಲಿನ ಭೂಮಿ ಕಬಳಿಸುವ ಉದ್ದೇಶ ಹೊಂದಿದೆ ಎಂದು ಸಾಮಾಜಿಕ ಮತ್ತು ರಾಜಕೀಯ ವಲಯದಲ್ಲಿ ಆರೋಪಗಳು ಕೇಳಿಬರುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.