ADVERTISEMENT

ಏರ್ ಇಂಡಿಯಾ ವಿಮಾನ ಊಟಕ್ಕೆ ಕತ್ತರಿ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 19:59 IST
Last Updated 10 ಜೂನ್ 2013, 19:59 IST

ನವದೆಹಲಿ(ಪಿಟಿಐ): ದೇಶದೊಳಗಿನ ಕಡಿಮೆ ಅವಧಿಯ ಪ್ರಯಾಣದ ವೇಳೆ ಏರ್ ಇಂಡಿಯಾ ವಿಮಾನಗಳಲ್ಲಿ ಉಚಿತ ಊಟಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ. 

ವಿಮಾನ ಪ್ರಯಾಣಿಕರಿಗೆ ಊಟ ನೀಡದಿರುವ ತೀರ್ಮಾನ ಇನ್ನೂ ಅಂತಿಮಗೊಂಡಿಲ್ಲ ಎಂದು ಏರ್ ಇಂಡಿಯಾದ ಮೂಲಗಳು ತಿಳಿಸಿವೆ.

90 ನಿಮಿಷದೊಳಗಿನ ಪ್ರಯಾಣದ ವೇಳೆ ಬಿಸಿಯೂಟ ನೀಡದಿರಲು ಈಗಾಗಲೇ ನಿರ್ಧರಿಸಲಾಗಿದೆ. ಒಂದು ಗಂಟೆಯ ಪ್ರಯಾಣ ನಡೆಸುವ ಪ್ರಯಾಣಿಕರಿಗೂ ಊಟ ನೀಡದಿರುವ ತೀರ್ಮಾನಿಸಲಾಗುವುದು ಎಂದು ಏರ್ ಇಂಡಿಯಾ ಹೇಳಿದೆ. ವಿಮಾನದಲ್ಲಿ ಬಿಸಿಯೂಟ ನೀಡುವುದರಿಂದ ಸಂಸ್ಥೆಗೆ ಹಣಕಾಸಿನ ಹೊರೆಯಾಗಲಿದೆ. ಅಲ್ಲದೆ ಇದು ಸಾಕಷ್ಟು ವಿದ್ಯುತ್ ಬಳಸುತ್ತದೆ ಎನ್ನಲಾಗಿದೆ. ಸದ್ಯ ಏರ್ ಇಂಡಿಯಾ  ವಿಮಾನಗಳಲ್ಲಿ 90 ನಿಮಿಷದೊಳಗಿನ ಪ್ರಯಾಣಿಕರಿಗೆ ಸ್ಯಾಂಡ್‌ವಿಚ್ ಮುಂತಾದ ಪದಾರ್ಥ ಮಾತ್ರ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.