ADVERTISEMENT

ಐಐಟಿ: ಕೌನ್ಸೆಲಿಂಗ್‌ಗೆ ‘ಸುಪ್ರೀಂ’ ಅವಕಾಶ

ಪಿಟಿಐ
Published 11 ಜುಲೈ 2017, 4:37 IST
Last Updated 11 ಜುಲೈ 2017, 4:37 IST
ಐಐಟಿ: ಕೌನ್ಸೆಲಿಂಗ್‌ಗೆ ‘ಸುಪ್ರೀಂ’ ಅವಕಾಶ
ಐಐಟಿ: ಕೌನ್ಸೆಲಿಂಗ್‌ಗೆ ‘ಸುಪ್ರೀಂ’ ಅವಕಾಶ   

ನವದೆಹಲಿ: ಈ ಸಾಲಿನ ಐಐಟಿ–ಜಂಟಿ ಪ್ರವೇಶ ಪರೀಕ್ಷೆ (ಜೆಇಇ (ಅಡ್ವಾನ್ಸ್ಡ್‌)–2017) ಫಲಿತಾಂಶದ ಆಧಾರದಲ್ಲಿ ದೇಶದಾದ್ಯಂತ ಭಾರ
ತೀಯ ತಂತ್ರಜ್ಞಾನ ಸಂಸ್ಥೆಗಳ (ಐಐಟಿ) ಪ್ರವೇಶಾತಿಗಾಗಿ ಕೌನ್ಸೆಲಿಂಗ್‌ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಅವಕಾಶ ನೀಡಿದೆ.
ಕೌನ್ಸೆಲಿಂಗ್‌ ಮತ್ತು ಪ್ರವೇಶ ಪ್ರಕ್ರಿಯೆಗೆ ಕಳೆದ ಶುಕ್ರವಾರ ತಾತ್ಕಾಲಿಕವಾಗಿ ನೀಡಿದ್ದ ತಡೆಯಾಜ್ಞೆಯನ್ನು ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ತೆರವುಗೊಳಿಸಿದೆ. ಐಐಟಿಗಳ ಕೌನ್ಸೆಲಿಂಗ್‌ ಮತ್ತು ಪ್ರವೇಶಾತಿಗೆ ಸಂಬಂಧಿಸಿದ ಯಾವುದೇ ಅರ್ಜಿಗಳನ್ನು ಪರಿಗಣಿಸದಂತೆ ಎಲ್ಲ ಹೈಕೋರ್ಟ್‌ಗಳಿಗೆ ಸೂಚಿಸಿದೆ.

ಭವಿಷ್ಯದಲ್ಲಿ ಪ್ರಶ್ನೆಪತ್ರಿಕೆಗಳಲ್ಲಿ ತಪ್ಪುಗಳು ನುಸುಳುವುದಿಲ್ಲ ಮತ್ತು ಪರೀಕ್ಷೆ ಬರೆದವರಿಗೆ   ಬೋನಸ್‌ ಅಂಕಗಳನ್ನು ನೀಡುವ ಪರಿಸ್ಥಿತಿ ನಿರ್ಮಾಣವಾಗು
ವುದಿಲ್ಲ ಎಂದು ಲಿಖಿತ ಹೇಳಿಕೆ ನೀಡುವಂತೆ ನ್ಯಾಯಪೀಠ ನಿರ್ದೇಶಿಸಿದೆ.

ಐಐಟಿಗಳ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌, ಮುಂದೆ ಅಂತಹ ಪರಿಸ್ಥಿತಿ ನಿರ್ಮಾಣವಾಗದು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.