ಮುಂಬೈ (ಪಿಟಿಐ/ಐಎಎನ್‌ಎಸ್): ವಾಣಿಜ್ಯ ನಗರಿಯನ್ನು ಬೆಚ್ಚಿ ಬೀಳಿಸಿದ್ದ ಶಕ್ತಿ ಮಿಲ್‌್ ಅವಳಿ ಅತ್ಯಾಚಾರ ಪ್ರಕರಣಗಳಲ್ಲಿ ಐವರು ತಪ್ಪಿತಸ್ಥರು ಎಂದು ಸೆಷನ್ಸ್‌್ ಕೋರ್ಟ್‌್ ಗುರುವಾರ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಶುಕ್ರವಾರ ಪ್ರಕಟಿಸಲಿದೆ.
2013ರ ಆಗಸ್ಟ್ 22ರಂದು ಪತ್ರಿಕಾ ಛಾಯಾಗ್ರಾಹಕಿ ಮೇಲೆ ಹಾಗೂ 2013ರ ಜುಲೈ 31ರಂದು ಕಾಲ್ ಸೆಂಟರ್ ಉದ್ಯೋಗಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಇಬ್ಬರು ಬಾಲ ಆರೋಪಿಗಳು ಸೇರಿ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿತ್ತು. ಈ ಪೈಕಿ ಮೂವರು ಎರಡೂ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.
ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಸಿರಾಜ್ ಖಾನ್ (21) ಹಾಗೂ ಕಾಲ್ ಸೆಂಟರ್ ಉದ್ಯೋಗಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಮೊಹಮ್ಮದ್‌್ ಅಷ್ಫಕ್‌್ ಶೇಖ್‌್ (26) ತಪ್ಪಿತಸ್ಥರೆಂದು ಕೋರ್ಟ್ ಹೇಳಿದೆ.
ಅಲ್ಲದೇ ಮೇಲಿನ ಎರಡೂ ಪ್ರಕರಣದಲ್ಲಿ ಭಾಗಿಯಾಗಿದ್ದ ವಿಜಯ್‌್ ಜಾಧವ್‌್ (19), ಕಾಸಿಂ ಹಫೀಜ್‌್ ಶೇಖ್‌್ ಅಲಿಯಾಸ್‌್ ಬೆಂಗಾಳಿ (21) ಮತ್ತು ಮೊಹಮ್ಮದ್‌್ ಸಲೀಂ ಅನ್ಸಾರಿ (28) ಕೂಡ ತಪ್ಪಿಸ್ಥರು ಎಂದು ಪ್ರಧಾನ ಸೆಷನ್ಸ್‌್ ಕೋರ್ಟ್‌್ ನ್ಯಾಯಾಧೀಶೆ ಶಾಲಿನಿ ಫಂನ್ಸಾಲ್ಕರ್‌್ ಜೋಷಿ ಹೇಳಿದರು.
ಎರಡೂ ಪ್ರಕರಣಗಳ ಬಾಲ ಆರೋಪಿಗಳನ್ನು ಬಾಲ ನ್ಯಾಯ ಮಂಡಳಿ ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸುತ್ತಿದೆ.
ತೀರ್ಪಿಗೆ ಸ್ವಾಗತ: ಸೆಷನ್ಸ್‌್ ಕೋರ್ಟ್‌್ ತೀರ್ಪನ್ನು ಮಹಾರಾಷ್ಟ್ರ ಗೃಹ ಸಚಿವ ಆರ್.ಆರ್.ಪಾಟೀಲ್‌್ ಸ್ವಾಗತಿಸಿದ್ದಾರೆ. ತೀರ್ಪು ಹೊರಬೀಳುವಾಗ ಅವರು ಕೋರ್ಟ್‌ನಲ್ಲಿಯೇ ಇದ್ದರು.
‘ ಈ ಪ್ರಕರಣಗಳನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ವಿಚಾರಣೆಗೊಳಪಡಿಸಲಾಗಿದೆ. ಕೊನೆಗೂ ಸಂತ್ರಸ್ತ ಯುವತಿಯರಿಬ್ಬರಿಗೆ ನ್ಯಾಯ ಸಿಕ್ಕಿದೆ. ಮುಂದೆ ಇಂಥ ಕೃತ್ಯ ನಡೆಯದಂತೆ ಈ ತೀರ್ಪು ಎಚ್ಚರಿಕೆಯ ಸಂದೇಶ ನೀಡಿದೆ ಎಂದು ಭಾವಿಸುತ್ತೇನೆ’ ಎಂದು ಅವರು ನುಡಿದರು.
ವರದಿ ಮಾಡಲು ಹೋದಾಗ ಮುಗಿಬಿದ್ದ ದುರುಳರು...
2013ರ ಆಗಸ್ಟ್‌್ 22ರಂದು ಮುಂಬೈನ ಶಕ್ತಿ ಮಿಲ್‌್ ಪ್ರದೇಶದಲ್ಲಿ ತನ್ನ ಸಹೋದ್ಯೋಗಿಯೊಂದಿಗೆ ‘ಚಾಳ’ಗಳ ಕುರಿತು ವರದಿ ಮಾಡಲು ಹೋಗಿದ್ದ ಇಂಗ್ಲಿಷ್ ನಿಯತಕಾಲಿಕವೊಂದರ ಛಾಯಾಗ್ರಾಹಕಿ (23) ಮೇಲೆ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಛಾಯಾಗ್ರಾಹಕಿ ಜತೆಗಿದ್ದ ಸಹೋದ್ಯೋಗಿಯನ್ನು ಮರಕ್ಕೆ ಕಟ್ಟಿಹಾಕಿ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು. ಈ ಸಂಬಂಧ ವಿಜಯ್‌್ ಜಾಧವ್, ಬೆಂಗಾಳಿ, ಸಲೀಂ ಅನ್ಸಾರಿ, ಸಿರಾಜ್‌್ ಖಾನ್ ಹಾಗೂ ಬಾಲಕನೊಬ್ಬನ ಮೇಲೆ ದೋಷಾರೋಪ ಹೊರಿಸಲಾಗಿತ್ತು.
ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌್ ಕಡೆಯಿಂದ 44 ಸಾಕ್ಷಿಗಳಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಆರೋಪಿಗಳ ಪರ ವಕೀಲರು ಮೂವರು ಸಾಕ್ಷಿಗಳಿಂದ ಹೇಳಿಕೆ ದಾಖಲಿಸಿಕೊಂಡಿದ್ದರು.
ಕಾಲ್ ಸೆಂಟರ್‌್ ಉದ್ಯೋಗಿ ಮೇಲೆ ಪೈಶಾಚಿಕ ಕೃತ್ಯ
2013ರ ಜುಲೈ 31ರಂದು ಶಕ್ತಿ ಮಿಲ್‌್ ಪ್ರದೇಶದಲ್ಲಿ ಕಾಲ್‌್ ಸೆಂಟರ್‌್ ಉದ್ಯೋಗಿ (18) ಮೇಲೆ ಐವರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಕೂಡ ಇದರಲ್ಲಿದ್ದರು.
ಈ ಪ್ರಕರಣ ಆರೋಪಿಗಳು: ಮೊಹಮ್ಮದ್‌್ ಅಷ್ಫಕ್‌್ ಶೇಖ್, ಮೊಹಮ್ಮದ್‌್ ಕಾಸಿಂ ಹಫೀಜ್ ಶೇಖ್‌್ ಅಲಿಯಾಸ್‌್ ಕಾಸಿಂ ಬೆಂಗಾಳಿ, ಸಲೀಂ ಅನ್ಸಾರಿ ಹಾಗೂ ವಿಜಯ್‌್ ಜಾಧವ್.
ಈ ಪ್ರಕರಣದಲ್ಲಿ 31 ಸಾಕ್ಷಿಗಳಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಅಲ್ಲದೇ ಆರೋಪಿಗಳ ಪರ ವಕೀಲರು ಕೇವಲ ಒಬ್ಬರಿಂದ ಹೇಳಿಕೆ ದಾಖಲಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.