ADVERTISEMENT

ಐಶ್‌, ಅಭಿಗೆ ‘ಹ್ಯಾಪಿ ಆ್ಯನಿವರ್ಸರಿ’

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:59 IST
Last Updated 25 ಸೆಪ್ಟೆಂಬರ್ 2013, 19:59 IST

ಮುಂಬೈ (ಪಿಟಿಐ): ಐಶ್ವರ್ಯ ರೈ ಹಾಗೂ  ಅಭಿಷೇಕ್‌ ಬಚ್ಚನ್‌ ‘ಹ್ಯಾಪಿ ಆ್ಯನಿವರ್ಸರಿ’ ಆಚರಿಸಿಕೊಳ್ಳುವ ಖುಷಿಯಲ್ಲಿದ್ದಾರೆ.

ಆರಾಧ್ಯಾಳ ಆರೈಕೆಯಲ್ಲಿ ಗಮನ ಕೇಂದ್ರೀಕರಿಸಿದ್ದ ಐಶ್‌, ಚಿತ್ರ ಜೀವನಕ್ಕೆ ನೀಡಿದ್ದ ಬ್ರೇಕ್‌ಗೆ ವಿದಾಯ ಹೇಳಿ ತಮ್ಮ ನಿಜ ಜೀವನದ ಜೋಡಿ ಅಭಿಷೇಕ್‌ ಜೊತೆ ಚಿತ್ರ ಬದುಕಿನಲ್ಲೂ ‘ಹ್ಯಾಪಿ ಆ್ಯನಿವರ್ಸರಿ’ ಆಚರಿಸಿಕೊಳ್ಳುತ್ತಿ­ದ್ದಾರೆ.

ಪತಿ ಅಭಿಷೇಕ್‌ ಜೊತೆ,  ಪ್ರಹ್ಲಾದ್‌ ಕಕ್ಕರ್‌ ನಿರ್ದೇಶನದ ‘ಹ್ಯಾಪಿ ಆ್ಯನಿವರ್ಸರಿ’ ಸಿನಿಮಾಕ್ಕೆ ಸಹಿ ಹಾಕುವ ಮೂಲಕ ಐಶ್‌ ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.