ಭುವನೇಶ್ವರ ( ಪಿಟಿಐ): ಮಾವೊವಾದಿಗಳು ಒತ್ತೆಯಾಗಿಸಿರುವ ಅಪಹೃತ ಬಿಜೆಡಿ ಶಾಸಕ ಜಿನಾ ಹಿಕಾಕ ಹಾಗೂ ಇಟಲಿ ಪ್ರವಾಸಿ ಮಾರ್ಗದರ್ಶಿ ಪಾಲೊ ಬಾಸ್ಕೊ ಅವರ ಬಿಡುಗಡೆಗೆ ವಿಧಿಸಿದ ಗಡುವು ಮಂಗಳವಾರ ಕೊನೆಗೊಳ್ಳಲಿದೆ. ಈ ನಡುವೆ ಒತ್ತೆಯಾಳುಗಳ ಬಿಡುಗಡೆಗೆ ಮಾವೊವಾದಿಗಳು ಹೊಸ ಷರತ್ತು ವಿಧಿಸಿದ್ದು, ಇದರಿಂದ ಇನ್ನಷ್ಟು ಅನಿಶ್ಚಿತತೆ ಉಂಟಾಗಿದೆ.
ತಮ್ಮ ಬಂಧಿತ 30 ಸಹಚರರನ್ನು ಬಿಡುಗಡೆಗೊಳಿಸಬೇಕು ಹಾಗೂ ಈತನಕ ಎಷ್ಟು ನಕ್ಸಲರನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂಬುದನ್ನು ದೃಢಪಡಿಸಬೇಕು ಎಂಬ ಷರತ್ತುಗಳನ್ನು ಮಾವೊವಾದಿಗಳು ಸರ್ಕಾರದ ಮುಂದಿಟ್ಟಿದ್ದಾರೆ. `ಹಿಕಾಕ ಅವರನ್ನು ಬಿಡುಗಡೆ ಮಾಡಲು ನಮ್ಮ 30 ಮಂದಿಯೊಂದಿಗೆ ಬಳಿಪೇಟಾ ಎಂಬಲ್ಲಿಗೆ ಮಂಗಳವಾರ ಬರಬೇಕು, ಆದರೆ ಪೊಲೀಸರು ಇಲ್ಲವೇ ಗುಪ್ತಚರ ಸಿಬ್ಬಂದಿ ಜೊತೆಯಲ್ಲಿರಬಾರದು~ ಎಂಬ ಷರತ್ತನ್ನು ಅಪಹೃತ ಶಾಸಕರ ಪತ್ನಿ ಕೌಸಲ್ಯಾ ಅವರಿಗೆ ಮಾವೊವಾದಿಗಳು ವಿಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.