ADVERTISEMENT

ಒಡಿಶಾ: 27 ನಕ್ಸಲರ ಬಿಡುಗಡೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 19:30 IST
Last Updated 4 ಏಪ್ರಿಲ್ 2012, 19:30 IST

ಭುವನೇಶ್ವರ (ಪಿಟಿಐ): ಬಿಜೆಡಿ ಶಾಸಕ ಮತ್ತು ಇಟಲಿ ಪ್ರಜೆಯನ್ನು ಮಾವೊವಾದಿಗಳ ವಶದಿಂದ ಬಿಡುಗಡೆಗೊಳಿಸುವ ಸಲುವಾಗಿ 8 ಮಂದಿ ನಕ್ಸಲರು ಸೇರಿದಂತೆ 27 ಜನರನ್ನು ಜೈಲಿನಿಂದ ಬಿಡುಗಡೆ ಮಾಡುವುದಾಗಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

`ಶಾಸಕ ಜಿನಾ ಹಿಕಾಕ ಅವರ ಬಿಡುಗಡೆಗಾಗಿ 8 ಮಂದಿ ಮಾವೊವಾದಿಗಳು, ಚಾಸಿ ಮುಲಿಯ ಆದಿವಾಸಿ ಸಂಘದ 15 ಸದಸ್ಯರನ್ನು ಹಾಗೂ ಇಟಲಿ ಪ್ರಜೆ ಬಿಡುಗಡೆಗಾಗಿ ಒಡಿಶಾ ರಾಜ್ಯ ಸಿಪಿಐ (ಮಾವೊವಾದಿ) ಸಂಘಟನಾ ಸಮಿತಿಯ ಬೇಡಿಕೆಯಂತೆ ಇತರ ನಾಲ್ವರನ್ನು  ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ~ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.