ADVERTISEMENT

‘ಒಬಿಸಿ ಅಸಮಾಧಾನವೇ ಬಿಜೆಪಿ ಸೋಲಿಗೆ ಕಾರಣ’

ಪಿಟಿಐ
Published 4 ಜೂನ್ 2018, 20:11 IST
Last Updated 4 ಜೂನ್ 2018, 20:11 IST

ಬಲಿಯಾ,ಉತ್ತರಪ್ರದೇಶ: ಉಪಚುನಾವಣೆಗಳಲ್ಲಿ ಬಿಜೆಪಿ ಸೋಲಲು ಇತರ ಹಿಂದುಳಿದ ವರ್ಗಗಳ (ಒಬಿಸಿ) ಅಸಮಾಧಾನವೇ ಕಾರಣ ಎಂದು ಉತ್ತರ ಪ್ರದೇಶದ ಸಚಿವ ಓಂ ಪ್ರಕಾಶ್‌ ರಾಜ್‌ಭರ್‌ ಹೇಳಿದ್ದಾರೆ.

ಕೇಶವ ಪ್ರಸಾದ್ ಮೌರ್ಯ ಅವರನ್ನು ಮುಖ್ಯಮಂತ್ರಿ ಮಾಡದಿರುವುದಕ್ಕೆ ಹಿಂದುಳಿದ ವರ್ಗಗಳು ಅಸಮಾಧಾನಗೊಂಡಿವೆ ಎಂದೂ ಹೇಳಿದ್ದಾರೆ.

‘ಇತರ ಹಿಂದುಳಿದ ವರ್ಗಕ್ಕೆ ಸೇರಿದ ಕೇಶವ ಪ್ರಸಾದ್‌ ಅವರ ನೇತೃತ್ವದಲ್ಲಿ ಬಿಜೆಪಿ, ವಿಧಾನಸಭೆ ಚುನಾವಣೆಯನ್ನು ಎದುರಿಸಿತ್ತು. ಆದರೆ ಬಳಿಕ ಯೋಗಿ ಆದಿತ್ಯನಾಥ್‌ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು. ಇದರಿಂದ ಹಿಂದುಳಿದ ವರ್ಗದವರು ಸಿಟ್ಟುಗೊಂಡಿದ್ದಾರೆ. ಇದು ಉಪಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ’ ಎಂದಿದ್ದಾರೆ.

ADVERTISEMENT

‘ಉಪಚುನಾವಣೆಗಳ ಸೋಲಿಗೆ ಸರ್ಕಾರವೇ ಹೊಣೆ. ಪಕ್ಷವು ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.