ADVERTISEMENT

ಒಳನುಸುಳಿಸಲು ಪಾಕ್ ದಾಳಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2012, 19:30 IST
Last Updated 23 ಆಗಸ್ಟ್ 2012, 19:30 IST

ಜಮ್ಮು (ಪಿಟಿಐ): ಪಾಕಿಸ್ತಾನ ಸೇನೆಯು ಕಾಶ್ಮೀರ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಿರುವುದರ ಹಿಂದೆ, ಭಯೋತ್ಪಾದಕರು ಮತ್ತು ಕಳ್ಳಸಾಗಣೆದಾರರ ಒಳ ನುಸುಳುವಿಕೆಗೆ ಆಸ್ಪದ ಕೊಡುವ ಹುನ್ನಾರ ಅಡಗಿದೆ ಎಂದು ಬಿಎಸ್‌ಎಫ್‌ನ ಹಿರಿಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಂತರರಾಷ್ಟ್ರೀಯ ಗಡಿ ರೇಖೆ ಉದ್ದಕ್ಕೂ ದಾಳಿ ನಡೆಸುವ ಮೂಲಕ ಬಿಎಸ್‌ಎಫ್ ಯೋಧರನ್ನು ಕಾರ್ಯಾಚರಣೆಯಲ್ಲಿ ಮಗ್ನರಾಗುವಂತೆ ಮಾಡಿ, ಬೇರೆ ಮಾರ್ಗಗಳ ಮುಖಾಂತರ ಉಗ್ರರು, ಕಳ್ಳಸಾಗಣಿಕೆದಾರರು, ನುಸುಳುಕೋರರನ್ನು ಕಾಶ್ಮೀರದೊಳಗೆ ನುಸುಳಿಸುವ ಯೋಜನೆಯನ್ನು ಪಾಕ್ ಹೊಂದಿದೆ ಎಂದು ಬೇಹುಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನ `ದಾಳಿ ಮಾಡು, ಮುನ್ನುಗ್ಗು~ ಎಂಬ ತಂತ್ರ ಅನುಸರಿಸುತ್ತಿದೆ ಎಂದವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.