ADVERTISEMENT

ಕಕ್ಷೆ ಸೇರಿದ ಉಪಗ್ರಹ

ಪಿಟಿಐ
Published 20 ಮೇ 2018, 15:58 IST
Last Updated 20 ಮೇ 2018, 15:58 IST
ಕಕ್ಷೆ ಸೇರಿದ ಉಪಗ್ರಹ
ಕಕ್ಷೆ ಸೇರಿದ ಉಪಗ್ರಹ   

ಶ್ರೀಹರಿಕೋಟಾ (ಪಿಟಿಐ): ಪಥದರ್ಶಕ ಸರಣಿಯ ಎಂಟನೇ ಉಪಗ್ರಹ ‘ಐಆರ್‌ಎನ್‌ಎಸ್ಎಸ್–1ಐ’ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರವು (ಇಸ್ರೊ) ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗುರುವಾರ ಮುಂಜಾನೆ ಯಶಸ್ವಿಯಾಗಿ ಉಡಾವಣೆ ಮಾಡಿತು.

‘ನ್ಯಾವ್‌ಐಸಿ’ ಸರಣಿಯ ಈ ಉಪಗ್ರಹವನ್ನು ಬೆಳಿಗ್ಗೆ 4 ಗಂಟೆ 4 ನಿಮಿಷಕ್ಕೆ ಉಡಾವಣೆ ಮಾಡಲಾಗಿದೆ. ಈ ಕೇಂದ್ರದಿಂದ ನಡೆದ 41ನೇ ಉಶಸ್ವಿ ಉಡಾವಣೆ ಇದಾಗಿದೆ. ‘ಉಡಾವಣಾ ಕಾರ್ಯವು ಸುಗಮವಾಗಿ ನಡೆದಿದೆ’ ಎಂದು ಇಸ್ರೊ ಅಧಿಕಾರಿಗಳು ತಿಳಿಸಿದ್ದಾರೆ.

ಪಥದರ್ಶಕ ಕ್ಷೇತ್ರದಲ್ಲಿ ಸೇನೆ ಮತ್ತು ನಾಗರಿಕ ಅಗತ್ಯಗಳನ್ನು ‘ನ್ಯಾವ್‌ಐಸಿ’ ಪೂರೈಸಲಿದೆ. ಭಾರತ ಮತ್ತು ಸುತ್ತಲಿನ ಪ್ರದೇಶದ ಸ್ಥಳದ ಮಾಹಿತಿಯನ್ನು ಉಪಗ್ರಹ ರವಾನಿಸಲಿದೆ.

ADVERTISEMENT

***

19 ನಿಮಿಷ– ಕಕ್ಷೆ ಸೇರಲು ಉಪಗ್ರಹ ತೆಗೆದುಕೊಂಡ ಸಮಯ

ಪಿಎಸ್‌ಎಲ್‌ವಿ–ಸಿ41– ಉಪಗ್ರಹವನ್ನು ಹೊತ್ತೊಯ್ದ ಉಡಾವಣಾ ವಾಹನ

1,425 ಕೆ.ಜಿ– ಉಪಗ್ರಹದ ತೂಕ

***

ಬೆಂಗಳೂರಿನ ಖಾಸಗಿ ಸಂಸ್ಥೆ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಸಹಭಾಗಿತ್ವದಲ್ಲಿ ಈ ಉ‍ಪಗ್ರಹವನ್ನು ಇಸ್ರೊ ನಿರ್ಮಿಸಿದೆ.

***

ಪಥದರ್ಶಕ ಸೇವೆಯಿಂದ ವಂಚಿತರಾದ ಸಮುದಾಯಕ್ಕೆ ‘ನ್ಯಾವ್‌ಐಸಿ’ ನೆರವಾಗಲಿದೆ. ಈ ಯೋಜನೆಗೆ ಇಡೀ ಇಸ್ರೊ ಕುಟುಂಬ ಶ್ರಮ ಹಾಕಿ ಯಶಸ್ವಿಯಾಗಿದ್ದು ಸಂತಸ ತಂದಿದೆ

–ಕೆ.ಶಿವನ್, ಇಸ್ರೊ ಅಧ್ಯಕ್ಷ

ನಮ್ಮ ವಿಜ್ಞಾನಿಗಳಿಗೆ ಅಭಿನಂದನೆಗಳು. ಬಾಹ್ಯಾಕಾಶ ಯೋಜನೆಯ ಈ ಯಶಸ್ಸು ಸಾಮಾನ್ಯ ಜನರಿಗೂ ಸಹಕಾರಿಯಾಗಲಿದೆ. ಇಸ್ರೊ ತಂಡ ನಮ್ಮ ಹೆಮ್ಮೆ!

–ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.