ನವದೆಹಲಿ (ಐಎಎನ್‌ಎಸ್): ಪಾಕಿಸ್ತಾನದ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರನ್ನು ಮೊಹಾಲಿಯಲ್ಲಿ ಭೇಟಿ ಮಾಡುವ ಮೊದಲು ಅನಧಿಕೃತ ಪ್ರತಿನಿಧಿಯೊಬ್ಬರ ಮುಖಾಂತರ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಷ್ಫಾಕ್ ಪರ್ವೇಜ್ ಕಯಾನಿ ಅವರನ್ನು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸಂಪರ್ಕಿಸಿದ್ದರು ಎಂಬ ಮಾಧ್ಯಮಗಳ ವರದಿಯನ್ನು ಪ್ರಧಾನಿ ಕಚೇರಿ ತಳ್ಳಿಹಾಕಿದೆ.
ಬ್ರಿಟನ್ ಪತ್ರಿಕೆಯನ್ನು ಉಲ್ಲೇಖಿಸಿ ಕೆಲವು ಮಾಧ್ಯಮಗಳು ಈ ಸಂಬಂಧದ ವರದಿಯನ್ನು ಪ್ರಕಟಿಸಿವೆ. ಆದರೆ ಈ ವರದಿ ಆಧಾರರಹಿತವಾದುದು ಎಂದು ಪ್ರಧಾನಿಯವರ ಮಾಧ್ಯಮ ಸಲಹೆಗಾರ ಹರೀಶ್ ಕಾರೆ ತಳ್ಳಿಹಾಕಿದ್ದಾರೆ.
ವಿಲಿಯಂ-ಕೇಟ್ ವಿವಾಹಕ್ಕೆ ಅದ್ದೂರಿ ಗೌನು!
ಲೂಧಿಯಾನ/ನವದೆಹಲಿ (ಐಎಎನ್‌ಎಸ್): ಬ್ರಿಟನ್‌ನ ದೊರೆ ವಿಲಿಯಂ ಮತ್ತು ಕೇಟ್ ಮಿಡ್ಲ್‌ಟನ್ ಇವರ ವೈಭವೋಪೇತ ವಿವಾಹ ಮಹೋತ್ಸವ ಈ ವಾರಾಂತ್ಯದಲ್ಲಿ ನಡೆಯಲಿದೆ. ವಿಶೇಷ ಎಂದರೆ ಮದುವೆ ಗೌನುಗಳನ್ನು ಲೂಧಿಯಾನದಿಂದ ಕಳುಹಿಸಲಾಗಿದೆ.
ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಆ್ಯಬಿನಲ್ಲಿ ಶುಕ್ರವಾರ ನಡೆಯಲಿರುವ ಈ ಐತಿಹಾಸಿಕ ಸಮಾರಂಭದಲ್ಲಿ ವಧೂ-ವರರು ಹಾಗೂ ವಿಶೇಷ ಆಹ್ವಾನಿತರಿಗೆ ಈ ಗೌನುಗಳನ್ನು ಉಡುಗೊರೆಯಾಗಿ ನೀಡಲಾಗುವುದು. ಇದಕ್ಕಾಗಿ ಸುಮಾರು 4000 ಗೌನುಗಳನ್ನು ಕಳುಹಿಸಲಾಗಿದೆ. ನುಣುಪಾಗಿರುವ, ಅತಿ ವಿಶಿಷ್ಟ ಉಣ್ಣೆಯಿಂದ ಈ ಗೌನುಗಳನ್ನು ಹೆಣೆಯಲಾಗಿದೆ. ಪ್ರತಿಯೊಂದಕ್ಕೂ 45 ಪೌಂಡ್ ವೆಚ್ಚ ತಗುಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.