ADVERTISEMENT

ಕರಾವಳಿ ಕಾವಲು ಪಡೆ ಡಿಐಜಿ ವಜಾ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2015, 19:59 IST
Last Updated 14 ಡಿಸೆಂಬರ್ 2015, 19:59 IST

ನವದೆಹಲಿ (ಪಿಟಿಐ): ಕಳೆದ ವರ್ಷ ಗುಜರಾತ್‌ನ ಕರಾ ವಳಿಯಲ್ಲಿ ಪಾಕ್‌ ಉಗ್ರರಿದ್ದ ದೋಣಿಯನ್ನು ಉಡಾಯಿಸುವಂತೆ ಆದೇಶಿಸಿದ್ದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾವಲು ಪಡೆ ಡಿಐಜಿ ಬಿ.ಕೆ. ಲೋಶಾಲಿ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ.

‘ಲೋಶಾಲಿ ಅವರು ತಪ್ಪು ಮಾಡಿ ದ್ದಾರೆ ಎಂದು ತನಿಖಾ ಮಂಡಳಿ ತಿಳಿಸಿದ್ದ ರಿಂದ ಅವರನ್ನು ಕಳೆದ ಶನಿವಾರ ಸೇವೆ ಯಿಂದ ವಜಾ ಮಾಡಲಾಗಿದೆ’ ಎಂದು ಕರಾವಳಿ ಕಾವಲು ಪಡೆ ಮೂಲಗಳು ತಿಳಿಸಿವೆ. ದೋಣಿಯಲ್ಲಿದ್ದವರು ಉಗ್ರರು ಎಂದು ಸಾಕ್ಷ್ಯಗಳು ಹೇಳುತ್ತಿವೆ. ಕರಾವಳಿ ಕಾವಲು ಪಡೆ ಸಿಬ್ಬಂದಿ ದೋಣಿಯನ್ನು ತಡೆಯುತ್ತಿದ್ದಂತೆಯೇ ಅದರಲ್ಲಿದ್ದವರು ದೋಣಿಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡರು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.