ADVERTISEMENT

ಕಲ್ಲಿದ್ದಲು: ಒಪ್ಪಂದ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST

ನವದೆಹಲಿ: ದೇಶದ ವಿದ್ಯುತ್ ಯೋಜನೆಗಳಿಗೆ ಅತಿ ಶೀಘ್ರದಲ್ಲೇ ಕಲ್ಲಿದ್ದಲು ಪೂರೈಸುವ ಒಪ್ಪಂದಗಳಿಗೆ ಸಹಿ ಹಾಕಲು ಭಾರತೀಯ ಕಲ್ಲಿದ್ದಲು ನಿಗಮ (ಸಿಐಎಲ್) ಸಮ್ಮತಿಸುವುದರೊಂದಿಗೆ ವಿದ್ಯುತ್ ಕ್ಷೇತ್ರ ನಿಟ್ಟುಸಿರು ಬಿಡುವಂತಾಗಿದೆ. ಸಿಐಎಲ್‌ನ ಸಮ್ಮತಿಯು ಹೂಡಿಕೆದಾರರ ವಿಶ್ವಾಸ ವೃದ್ಧಿಗೂ ನೆರವಾಗಲಿದೆ.

ವಿದ್ಯುತ್ ಕ್ಷೇತ್ರದ ಸಮಸ್ಯೆಗಳ ಅಧ್ಯಯನಕ್ಕೆ ಪ್ರಧಾನಿ ನೇಮಿಸಿದ್ದ ಕಾರ್ಯದರ್ಶಿಗಳ ಸಮಿತಿಯ ಸಭೆಯಲ್ಲಿ ಬುಧವಾರ ಸಿಐಎಲ್ ಈ ಒಪ್ಪಂದಕ್ಕೆ ಸಮ್ಮತಿ ನೀಡಿದೆ ಎಂದು ತಿಳಿದುಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.