ADVERTISEMENT

ಕಲ್ಲಿದ್ದಲು ಹಂಚಿಕೆ ವಿವರ ಬಹಿರಂಗಕ್ಕೆ ನಕಾರ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 19:30 IST
Last Updated 3 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವಿವರಗಳನ್ನು ನೀಡಲು ಪ್ರಧಾನಿ ಕಾರ್ಯಾಲಯ ನಿರಾಕರಿಸಿದೆ.

`ಹಗರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಕಾಯ್ದೆ 8ನೇ ವಿಧಿ ಪ್ರಕಾರ ಯಾವುದೇ ರೀತಿಯ ಮಾಹಿತಿಗಳನ್ನು ಬಹಿರಂಗಗೊಳಿಸುವುದನ್ನು ತಡೆಹಿಡಿಯಲಾಗಿದೆ~ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಮಾಹಿತಿ ಹಕ್ಕು ಕಾಯ್ದೆ ಆಧಾರದಲ್ಲಿ, ಕಲ್ಲಿದ್ದಲು ಸಚಿವರು ಮತ್ತು ಪ್ರಧಾನಿ ನಡುವೆ ನಡೆದ ಎಲ್ಲಾ ಮಾತುಕತೆಗಳು, ಅಂತಿಮ ನಿರ್ಧಾರದ ಪ್ರತಿಗಳು, ಅನುಮತಿಗಳು, ಆದೇಶಗಳು ಮತ್ತು ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಕುರಿತಂತೆ ಕಲ್ಲಿದ್ದಲು ಸಚಿವರು ಮತ್ತು ಪ್ರಧಾನಿ ಕಾರ್ಯಾಲಯದ ನಡುವಿನ ಮಾತುಕತೆಗಳ ವಿವರ ನೀಡುವಂತೆ ನ್ಯಾಯವಾದಿ ವಿವೇಕ್ ಗಾರ್ಗ್ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.