ADVERTISEMENT

ಕಲ್ಲು ಬಿದ್ದು ಗಾಯ: ಪುರಿ ದೇವಾಲಯಕ್ಕೆ ತಜ್ಞರ ಭೇಟಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST

ಭುವನೇಶ್ವರ: ಪುರಿಯ ಜಗನ್ನಾಥ ದೇವಾಲಯದ ಮೇಲ್ಭಾಗದಿಂದ ಕಲ್ಲು ಬಿದ್ದು ಅಲ್ಲಿಯ ಪರಿಚಾರಕನಿಗೆ ಗಾಯವಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ (ಎಎಸ್‌ಐ) ಇಬ್ಬರು ಸದಸ್ಯರ ತಂಡವು ಪ್ರಾಥಮಿಕ ತನಿಖೆ ನಡೆಸಲು ದೇವಾಲಯಕ್ಕೆ ಸೋಮವಾರ ಭೇಟಿ ನೀಡಿತು.

ದೇವಸ್ಥಾನ ಸಮುಚ್ಚಯದಲ್ಲಿನ ಕಂಚಿ ಗಣೇಶ ದೇವಾಲಯದ ಬಳಿ ಪರಿಚಾರಿಕ ದೇವಿ ಪ್ರಸಾದ್ ಪಾಂಡ ಭಾನುವಾರ ಕೆಲವು ಭಕ್ತಾದಿಗಳ ಜೊತೆ ಹೋಗುತ್ತಿದ್ದಾಗ, ಸುಮಾರು 15 ಕೆ.ಜಿ. ತೂಕದ ಎರಡು ಕಲ್ಲುಗಳು  ದೇವಾಲಯದ ಮೇಲ್ಭಾಗದಿಂದ ಬಿದ್ದಿವೆ. ಇದರಿಂದ ಆತನ ತಲೆ, ಕೈಗೆ ಗಾಯಗಳಾಗಿದ್ದು, ಭಕ್ತಾದಿಗಳಿಗೆ ಯಾವುದೇ ಅಪಾಯ ಸಂಭವಿಸಲಿಲ್ಲ  ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ದೇವಾಲಯದ ನಿರ್ವಹಣೆಗೆ ಎಎಸ್‌ಐ ಸರಿಯಾದ ಕ್ರಮಗಳನ್ನು ಕೈಗೊಂಡಿಲ್ಲ ಎಂದು ದೇವಿ ಪ್ರಸಾದ್ ಆಪಾದಿಸಿದರು.

ದೇವಾಲಯದ ಮೇಲ್ಭಾಗವನ್ನು ಗಟ್ಟಿಗೊಳಿಸಲು ಬಳಸಿದ ಸಿಮೆಂಟ್‌ಗಾರೆಯ ದಪ್ಪನೆಯ ತುಂಡುಗಳು ಪರಿಚಾರಕನ ಮೇಲೆ ಬಿದ್ದಿದೆಯೇ ಹೊರತು ಕಲ್ಲುಗಳಲ್ಲ. ಸದ್ಯದಲ್ಲಿಯೇ ಮತ್ತೊಂದು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

 ಎಂದು ಸ್ಥಳಕ್ಕೆ ಭೇಟಿ ನೀಡಿದ ಸದಸ್ಯರ ತಂಡ ದೇವಸ್ಥಾನದ ಆಡಳಿತ ಮಂಡಳಿಗೆ ತಿಳಿಸಿದೆ.
ದೇವಾಲಯದ ಮೇಲ್ಭಾಗದಿಂದ ಕಲ್ಲುಗಳು ಅಥವಾ ಕಾಂಕ್ರೀಟ್ ತುಂಡುಗಳು ಬೀಳುತ್ತಿರುವುದು ಇದೇ ಮೊದಲಲ್ಲ. ಈ ರೀತಿಯ ಅವಘಡಗಳು ಹಿಂದೆ ಹಲವು ಬಾರಿ ಘಟಿಸಿವೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.