ADVERTISEMENT

ಕಾರ್ತಿಗೆ 12 ದಿನ ನ್ಯಾಯಾಂಗ ಬಂಧನ

ಪಿಟಿಐ
Published 12 ಮಾರ್ಚ್ 2018, 19:34 IST
Last Updated 12 ಮಾರ್ಚ್ 2018, 19:34 IST
ಕಾರ್ತಿಗೆ 12 ದಿನ ನ್ಯಾಯಾಂಗ ಬಂಧನ
ಕಾರ್ತಿಗೆ 12 ದಿನ ನ್ಯಾಯಾಂಗ ಬಂಧನ   

ನವದೆಹಲಿ: ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಅವರ ಮಗ ಕಾರ್ತಿ ಅವರನ್ನು ದೆಹಲಿ ನ್ಯಾಯಾಲಯ 12 ದಿನ ನ್ಯಾಯಾಂಗ ಬಂಧನಕ್ಕೆ ಸೋಮವಾರ ಒಪ್ಪಿಸಿದೆ.

ಸಿಬಿಐ ಅಧಿಕಾರಿಗಳು ಪುನಃ ಕಾರ್ತಿ ಅವರನ್ನು ವಿಚಾರಣೆಗಾಗಿ ವಶಕ್ಕೆ ಕೋರದ ಕಾರಣ ನ್ಯಾಯಾಲಯ ಅವರನ್ನು ಮಾರ್ಚ್‌ 24ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಫೆ. 28ರಿಂದ ಇಲ್ಲಿಯವರೆಗೆ ಸಿಬಿಐ ವಶದಲ್ಲಿದ್ದ ಕಾರ್ತಿ ಬಂಧನ ಅವಧಿ ಸೋಮವಾರ ಕೊನೆಗೊಂಡ ಕಾರಣ ಸಿಬಿಐ ಅಧಿಕಾರಿಗಳು ಅವರನ್ನು ನ್ಯಾಯಾ
ಲಯದ ಎದುರು ಹಾಜರುಪಡಿಸಿದ್ದರು.

ADVERTISEMENT

ಮನವಿಗೆ ಸಿಗದ ಮನ್ನಣೆ: ಜೈಲಿನಲ್ಲಿ ಪ್ರತ್ಯೇಕ ಕೊಠಡಿ, ಹೆಚ್ಚಿನ ಭದ್ರತೆ, ಮನೆ ಊಟ ಸೇರಿದಂತೆ ಕಾರ್ತಿ ಮುಂದಿಟ್ಟ ಹಲವು ಬೇಡಿಕೆಗಳನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ.

ಈ ನಡುವೆ ಸಿಬಿಐನಿಂದ ಬಂಧನ ಭೀತಿ ಎದುರಿಸುತ್ತಿರುವ ಕಾರ್ತಿ ಅವರ ಲೆಕ್ಕಪರಿಶೋಧಕ ಎಸ್‌. ಭಾಸ್ಕರರಾಮನ್‌ ಅವರು ನಿರೀಕ್ಷಣಾ ಜಾಮೀನು ಕೋರಿ ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ದಾಖಲಿಸಿದ ಪ್ರಕರಣದಲ್ಲಿ ಜೈಲು ಸೇರಿರುವ ಭಾಸ್ಕರರಾಮನ್‌ ಅವರನ್ನು ಸಿಬಿಐ ಬಂಧಿಸುವ ಸಾಧ್ಯತೆ ಇದೆ.

ಕಾರ್ತಿ ಬೇಡಿಕೆಗಳು

* ಮನೆಯ ಊಟಕ್ಕೆ ಕಾರ್ತಿ ಬೇಡಿಕೆ

* ಜಾಮೀನು ಅರ್ಜಿ ಬೇಗ ವಿಚಾರಣೆಗೆ ಮನವಿ

* ಸುರಕ್ಷತೆಯ ದೃಷ್ಟಿಯಿಂದ ತಿಹಾರ್‌ ಜೈಲಿನಲ್ಲಿ ಪ್ರತ್ಯೇಕ ಕೋಣೆಗೆ ಕೋರಿಕೆ

* ಜೀವಭಯದ ಕಾರಣ ಹೆಚ್ಚಿನ ಭದ್ರತೆಗೆ ಪಟ್ಟು

ನ್ಯಾಯಾಲಯ ನಕಾರ

* ಕಾರ್ತಿ ಯಾವ ಬೇಡಿಕೆಗೂ ಸಿಗದ ನ್ಯಾಯಾಲಯದ ಪುರಸ್ಕಾರ

* ನಿಗದಿಯಂತೆ ಮಾರ್ಚ್ 15ರಂದು ಜಾಮೀನು ಅರ್ಜಿಯ ವಿಚಾರಣೆ

* ಕಾರಾಗೃಹ ನಿಯಮಾವಳಿ ಅನ್ವಯ ಸೌಲಭ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.