ADVERTISEMENT

ಕಾರ್ಮಿಕ ಸಚಿವಾಲಯದ ವೆಬ್ ಪೋರ್ಟಲ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 19:30 IST
Last Updated 19 ಏಪ್ರಿಲ್ 2012, 19:30 IST

ನವದೆಹಲಿ: ದೇಶದ ಅಸಂಘಟಿತ ವಲಯದ ನೌಕರರಿಗೆ ವೃತ್ತಿ ಕೌಶಲ್ಯವನ್ನು ನೀಡುವ ಸಲುವಾಗಿ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ಆರಂಭಿಸಿರುವ ವೆಬ್ ಪೋರ್ಟಲ್ ಅನ್ನು ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಗುರುವಾರ ಉದ್ಘಾಟಿಸಿದರು. ಹ್ಯೂಲೆಟ್ ಪಕಾರ್ಡ್ ಈ ವೆಬ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ.

ಕೌಶಲ್ಯ ಅಭಿವೃದ್ಧಿ ಯೋಜನೆ (ಎಸ್‌ಡಿಐಎಸ್) ಅಡಿ ಪೋರ್ಟಲ್ ಆರಂಭಗೊಂಡಿದ್ದು, ಅಸಂಘಟಿತ ವಲಯದ ನೌಕರರು ಈ ಯೋಜನೆಯಡಿ ತರಬೇತಿ ಪಡೆಯುವ ಮುನ್ನ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲುನೆರವಾಗಲಿದೆ.

ತರಬೇತಿ ಮುಕ್ತಾಯಗೊಂಡು ಪ್ರಮಾಣಪತ್ರ ಪಡೆಯುವವರೆಗಿನ ನೌಕರರ ಎಲ್ಲಾ ಹಂತಗಳ ವಿವರ ಪೋರ್ಟಲ್‌ನಲ್ಲಿ ದಾಖಲಾಗಲಿದೆ.

ಇದೇ ವೇಳೆ ಮಾಲೀಕರಿಗೆ ನೌಕರರ ವೈಯಕ್ತಿಕ ವಿವರಗಳ ಮಾಹಿತಿ ಲಭ್ಯವಾಗಲಿದೆಯಲ್ಲದೆ, ತರಬೇತಿ ಹೊಂದಿದ ನೌಕರರಿಗೆ ಸಂಘಟಿತ ವಲಯದಲ್ಲಿ ಉದ್ಯೋಗ ದೊರಕಿಸಿಕೊಡಲೂ ನೆರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.