
ಪ್ರಜಾವಾಣಿ ವಾರ್ತೆತಿರುವನಂತಪುರ (ಪಿಟಿಐ): ‘ಕಾಸಿಗಾಗಿ ಪ್ರಕಟಿಸುವ ಎಲ್ಲ ಸುದ್ದಿಗಳನ್ನು ಚುನಾವಣಾ ಅಕ್ರಮ’ ಎಂದು ಪರಿಗಣಿಸುವಂತೆ ಚುನಾವಣಾ ಆಯೋಗವು ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಿದೆ.
‘ಕಾಸಿಗಾಗಿ ಸುದ್ದಿ’ ಚುನಾವಣಾ ಪ್ರಕ್ರಿಯೆ ಮೇಲೆ ಗಂಭೀರ ಹಾನಿ ಉಂಟು ಮಾಡುವ ಕಾರಣದಿಂದ ಇದನ್ನು ಅಪರಾಧ ಎಂದೇ ಪರಿಗಣಿಸಬೇಕು’ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಶನಿವಾರ ಹೇಳಿದ್ದಾರೆ.
‘ಚುನಾವಣಾ ಸುಧಾರಣೆ’ ಕುರಿತು ನಡೆದ ವಿಚಾರಣಾ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.