ADVERTISEMENT

ಕೆಲಕಾಲ ಕರ್ಫ್ಯೂ ಸಡಿಲಿಕೆ

ಮುಜಾಫರ್‌ನಗರ ಹಿಂಸಾಚಾರ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 10:22 IST
Last Updated 11 ಸೆಪ್ಟೆಂಬರ್ 2013, 10:22 IST

ಮುಜಾಫರ್‌ನಗರ (ಪಿಟಿಐ) : ಉತ್ತರಪ್ರದೇಶದ ಮುಜಾಫರ್‌ನಗರ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತವು ಗಲಭೆಗ್ರಸ್ತ ಮೂರು ಪ್ರದೇಶಗಳಲ್ಲಿ ಬುಧವಾರ ನಾಲ್ಕು ಗಂಟೆಗಳ ಕಾಲ ಕರ್ಫ್ಯೂ ಸಡಿಲಿಕೆ ಮಾಡಿದೆ.

ಮಧ್ಯಾಹ್ನ 12 ಗಂಟೆಯಿಂದ ನಾಲ್ಕುಗಂಟೆಗಳ ವರೆಗೆ ಕರ್ಫ್ಯೂ ಸಡಿಲಿಕೆಗೆ ಮಾಡಲಾಗುವುದು ಎಂದು ಜಿಲ್ಲಾ ನ್ಯಾಯಾಧೀಶ ಕುಶಾಲ್ ರಾಜ್ ಶರ್ಮಾ ಅವರು ತಿಳಿಸಿದರು.

ಪರಿಸ್ಥಿತಿ ಅವಲೋಕಿಸಿದ ಜಿಲ್ಲಾಡಳಿತ ಜನರಿಗೆ ಅನುಕೂಲವಾಗುವಂತೆ ಕರ್ಫ್ಯೂ ಸಡಿಲಿಕೆ ಮಾಡಲು ನಿರ್ಧರಿಸಿತು. ಈ ವೇಳೆ ಪೊಲೀಸರು ಮತ್ತು ಅರೆ ಸೇನಾ ಪಡೆಗಳು ತೀವ್ರ ನಿಗಾ ವಹಿಸಲಿದೆ.

ಹಿಂಸಾಚಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಕೊತ್ವಾಲಿ, ಸಿವಿಲ್ ಲೈನ್ಸ್ ಹಾಗೂ ನಯೀ ಮಂಡಿ ಪ್ರದೇಶಗಳಲ್ಲಿ ಶನಿವಾರ ಕರ್ಫ್ಯೂ ಹೇರಲಾಗಿತ್ತು.

ಘಟನೆಯಲ್ಲಿ ಸತ್ತವರ ಸಂಖ್ಯೆ 41ಕ್ಕೆ ಏರಿದ್ದು, ಸುಮಾರು 400 ಮಂದಿಯನ್ನು ಬಂಧಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.