ADVERTISEMENT

‘ಖಾತೆಗೆ ₹ 15 ಲಕ್ಷ: ಆರ್‌ಟಿಐ ವ್ಯಾಪ್ತಿಗೆ ಬರಲ್ಲ’

ಪಿಟಿಐ
Published 23 ಏಪ್ರಿಲ್ 2018, 20:04 IST
Last Updated 23 ಏಪ್ರಿಲ್ 2018, 20:04 IST
‘ಖಾತೆಗೆ ₹ 15 ಲಕ್ಷ: ಆರ್‌ಟಿಐ ವ್ಯಾಪ್ತಿಗೆ ಬರಲ್ಲ’
‘ಖಾತೆಗೆ ₹ 15 ಲಕ್ಷ: ಆರ್‌ಟಿಐ ವ್ಯಾಪ್ತಿಗೆ ಬರಲ್ಲ’   

ನವದೆಹಲಿ: ಜನರ ಬ್ಯಾಂಕ್‌ ಖಾತೆಗಳಿಗೆ ತಲಾ ₹15 ಲಕ್ಷ ಠೇವಣಿ ಇಡುವುದಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.

‘ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ ₹15 ಲಕ್ಷ ಹಾಕುವುದಾಗಿ ಪ್ರಧಾನಿ ಮೋದಿ 2014ರ ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಭರವಸೆ ಯಾವಾಗ ಈಡೇರುತ್ತದೆ’ ಎಂದು ಮಾಹಿತಿ ಕೋರಿ ಮೋಹನ್ ಕುಮಾರ್ ಶರ್ಮಾ ಎಂಬುವರು 2016ರಲ್ಲಿ ಕೇಂದ್ರ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.

‘ಪಿಎಂಒ ಪ್ರತಿಕ್ರಿಯೆ ಸೂಕ್ತ’: ನೋಟು ರದ್ದತಿ ಅಧಿಕೃತ ಘೋಷಣೆಗೂ ಮೊದಲೇ ಮುದ್ರಣ ಮಾಧ್ಯಮಗಳಿಗೆ ಈ ವಿಷಯ ಹೇಗೆ ಸೋರಿಕೆಯಾಗಿತ್ತು ಎಂದು ಶರ್ಮಾ ಕೇಳಿದ್ದರು.

ADVERTISEMENT

‘ಅರ್ಜಿದಾರರು ಕೇಳಿರುವ ಪ್ರಶ್ನೆ ಆರ್‌ಟಿಐ ಕಾಯ್ದೆಯ ಸೆಕ್ಷನ್ 2(ಎಫ್‌) ವ್ಯಾಪ್ತಿ ಅಡಿ ಬರುವುದಿಲ್ಲ’ ಎಂದು ಪ್ರಧಾನಿ ಕಾರ್ಯಾಲಯ ಉತ್ತರಿಸಿದೆ.

ಆರ್‌ಟಿಐ ಅರ್ಜಿ ಕುರಿತು ಪಿಎಂಒ ಹಾಗೂ ಆರ್‌ಬಿಐ ನೀಡಿರುವಮಾಹಿತಿ ಸೂಕ್ತವಾಗಿದೆ ಎಂದು ಎಂದು ಕೇಂದ್ರ ಮಾಹಿತಿ ಆಯೋಗದ ಮುಖ್ಯಸ್ಥ ಆರ್.ಕೆ. ಮಾಥುರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.