ADVERTISEMENT

ಗಂಗಾ ನದಿಯಲ್ಲಿ ಮಗುಚಿದ ದೋಣಿ: 18 ಜನ ಕಣ್ಮರೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2014, 19:30 IST
Last Updated 5 ಆಗಸ್ಟ್ 2014, 19:30 IST

ವಾರಾಣಸಿ (ಪಿಟಿಐ): ಗಂಗಾ ನದಿ­ಯಲ್ಲಿ ಬುಧವಾರ ಸಂಭವಿಸಿದ ದೋಣಿ ದುರಂತದಲ್ಲಿ 18 ಜನರು ಕಣ್ಮರೆ­ಯಾಗಿದ್ದಾರೆ.

ಶೂಲಟಂಕೇಶ್ವರ್‌ ಪ್ರದೇಶದ ಬೇತಾ­­ವರ್ ಘಾಟ್ ಬಳಿ ನದಿಯಲ್ಲಿ ದೋಣಿ ಬುಡಮೇಲಾಯಿತು. ದೋಣಿ­ಯಲ್ಲಿ ಪ್ರಯಾಣಿಸುತ್ತಿದ್ದ 40 ಜನರ ಪೈಕಿ 22 ಜನರು ಈಜಿ ದಡ ಸೇರಿ­ದರು. ದೋಣಿಯಲ್ಲಿದ್ದ ಬಹು­ತೇಕ ಜನರು ವಾರಾಣಸಿಯಲ್ಲಿ ಕೆಲಸ ಮುಗಿಸಿ­ಕೊಂಡು ಸ್ವಗ್ರಾಮ ಮಿರ್ಜಾ­ಪುರಕ್ಕೆ ಮರಳುತ್ತಿದ್ದರು. ನದಿಯಲ್ಲಿ ಭಾರಿ ನೀರಿನ ಸೆಳೆತ, ಪ್ರಬಲವಾದ ತೆರೆಗಳ ಹೊಡೆತಕ್ಕೆ  ಸಿಲುಕಿ ದೋಣಿ ಬುಡ ಮೇಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.