ADVERTISEMENT

ಗಂಗಾ ನದಿ ತೀರ ಪ್ರದೇಶಗಳಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿದ ಎನ್‌ಜಿಟಿ

ಏಜೆನ್ಸೀಸ್
Published 15 ಡಿಸೆಂಬರ್ 2017, 9:50 IST
Last Updated 15 ಡಿಸೆಂಬರ್ 2017, 9:50 IST
ಗಂಗಾ ನದಿ ತೀರ ಪ್ರದೇಶಗಳಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿದ ಎನ್‌ಜಿಟಿ
ಗಂಗಾ ನದಿ ತೀರ ಪ್ರದೇಶಗಳಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿದ ಎನ್‌ಜಿಟಿ   

ನವದೆಹಲಿ: ಗಂಗಾನದಿ ದಡದಲ್ಲಿರುವ ಹರಿದ್ವಾರ, ರಿಷಿಕೇಶಗಳಂತ ಹಲವು ನಗರಗಳಲ್ಲಿ ಪ್ಲಾಸ್ಟಿಕ್‌ ವಸ್ತುಗಳ ಬಳಕೆಯ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್‌ಜಿಟಿ) ಘೋಷಿಸಿದೆ.

ಎನ್‌ಜಿಟಿ ಮುಖ್ಯಸ್ಥ ನ್ಯಾ. ಸ್ವತಂತ್ರ ಕುಮಾರ್‌ ನೇತೃತ್ವದ ಪೀಠ ಉತ್ತರಕಾಶಿವರೆಗೂ ಪ್ಲಾಸ್ಟಿಕ್‌ ಚೀಲ, ಪ್ಲೇಟ್‌ಗಳು ಹಾಗೂ ಮತ್ತಿತರೆ ಪ್ಲಾಸ್ಟಿಕ್‌ ವಸ್ತುಗಳ ಮಾರಾಟ, ಉತ್ಪಾದನೆ ಮತ್ತು ಸಂಗ್ರಹಣೆಯನ್ನು ನಿಷೇಧಿಸಿದೆ.

ಪರಿಸರವಾದಿ ಎಮ್‌.ಸಿ. ಮೆಹ್ತಾ  ಅವರ ಮನವಿಯ ವಿಚಾರಣೆ ನಡೆಸಿದ ಹಸಿರು ಪೀಠ ಈ ಆದೇಶ ಹೊರಡಿಸಿದೆ. ಆದೇಶ ಉಲ್ಲಂಘಿಸುವವರಿಗೆ ₹ 5 ಸಾವಿರ ದಂಡ ವಿಧಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ADVERTISEMENT

ಈ ಹಿಂದೆಯೂ ಇಂತಹ ಆದೇಶ ಹೊರಡಿಸಲಾಗಿತ್ತಾದರೂ ಪ್ಲಾಸ್ಟಿಕ್‌ ಬಳಕೆ ನಿಯಂತ್ರಣಕ್ಕೆ ಬಂದಿರಲಿಲ್ಲ. ನದಿ ತೀರ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಬಳಕೆಯಿಂದಾಗಿ ಮಾಲಿನ್ಯ ಹೆಚ್ಚಳವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.