ADVERTISEMENT

ಗಡಿ ಅತಿಕ್ರಮಣ: ಭಾರತ- ಚೀನಾ ಸೇನಾಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 19:59 IST
Last Updated 22 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಕಳೆದ ವರ್ಷ ಭಾರತದ ಲಡಾಕ್‌ನಲ್ಲಿ ಚೀನಾದ ಸೇನಾಪಡೆ ನಡೆಸಿದ ಗಡಿ ಅತಿಕ್ರಮಣ ಕುರಿತು ಚರ್ಚಿಸಲು ಉಭಯದೇಶಗಳ ಸೇನಾಧಿಕಾರಿಗಳು ಶೀಘ್ರ ಸಭೆ ನಡೆಸಲಿದ್ದಾರೆ.

`ಗಡಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಚೀನಾದೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಘಟನೆ ಕುರಿತು ಎರಡೂ ದೇಶಗಳ ಸೇನಾಧಿಕಾರಿಗಳ ಸಭೆಗಳು ನಡೆಯುತ್ತಿದ್ದು, ಘಟನೆಯ ವಾಸ್ತವಾಂಶಗಳನ್ನು ಪರಿಶೀಲಿಸಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು' ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಸಲ್ಮಾನ್ ಖುರ್ಷಿದ್ ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಚೀನಾದ `ಪೀಪಲ್ಸ್ ಲಿಬರೇಶಷನ್ ಆರ್ಮಿ' (ಪಿಎಲ್‌ಎ) ಕಳೆದ ಏಪ್ರಿಲ್ 15ರಂದು ಭಾರತದ ಗಡಿಯೊಳಗೆ 10 ಕಿ.ಮೀ. ನುಸುಳಿ  ದೌಲತ್ ಬೆಗ್ ಒಲ್ಡಿ (ಡಿಬಿಒ) ಭಾಗದ ಬರ್ಥೆ ಪ್ರದೇಶವನ್ನು ಅತಿಕ್ರಮಿಸಿಕೊಂಡು ಬೀಡುಬಿಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT