ತಿರುವನಂತಪುರಂ (ಪಿಟಿಐ): ಗರ್ಭ ಧರಿಸಿದ ಗೋವುಗಳ ಹತ್ಯೆ ನಿಷೇಧಿಸಲು ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ನಿರ್ಧರಿಸಿದೆ.
`ಈ ಸಂಬಂಧ ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು. ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿ ತರಲಾಗುವುದು~ ಎಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
`ಈ ನಿಷೇಧವು ಹಸುಗಳಿಗೆ ಮಾತ್ರವಲ್ಲದೆ, ಮೇಕೆ ಮತ್ತು ಇತರ ಪಶುಗಳಿಗೂ ಅನ್ವಯಿಸುತ್ತದೆ. ಗರ್ಭ ಧರಿಸಿದ ಪ್ರಾಣಿಗಳ ಹತ್ಯೆಯು ಕ್ರೂರವಾಗಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ~ ಎಂದು ಚಾಂಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.